Home Archive by category Fresh News (Page 2)

ಅಪಘಾತ ವಲಯವಾಗಿ ರೂಪುಗೊಳ್ಳುತ್ತಿರುವ ಪಡುಬಿದ್ರಿ ಜಂಕ್ಷನ್

ಇಲ್ಲಿನ ಕಾರ್ಕಳ ರಸ್ತೆಗೆ ತಿರುಗುವ ಜಂಕ್ಷನ್ ನಿರತರ ಅಪಘಾತಗಳ ತಾಣವಾಗುತ್ತಿದ್ದು, ಗುರುವಾರ ರಾತ್ರಿ ಮತ್ತೆ ಲಾರಿ ಬೈಕ್ ಮಧ್ಯೆ ಅಫಘಾತ ನಡೆದ ಬೈಕ್ ಸವಾರನ ಕಾಲಿನ ಎಲುಬು ಮುರಿತಗೊಂಡು ಮಣಿಪಾಲ ಆಸ್ಪತ್ರೆ ಸೇರಿದ್ದಾನೆ. ಗಾಯಾಳು ನಿಟ್ಟೆ ನಿವಾಸಿ ನಂದಿಕೂರು “ಶ್ರೀಚಕ್ರ” ಗೋಣಿಚೀಲ ಪ್ಯಾಕ್ಟರಿಯ ಸಿಬ್ಬಂದಿ ವಿನೋದ್(24). ಈತ ತನ್ನ ಪರಿಚಯಸ್ಥರೊಂದಿಗೆ

ಸಿಎಂ ಸ್ಥಾನಕ್ಕೆ ಚನ್ನಿ v/s ಸಿಧು: ಚುನಾವಣೆಗೂ ಮುನ್ನವೇ ಸಿಎಂ ಅಭ್ಯರ್ಥಿ ಹೆಸರು ಘೋಷಿಸಲು ಕಾಂಗ್ರೆಸ್‌ ಚಿಂತನೆ!

ಪಂಜಾಬ್‌ ಚುನಾವಣೆಗೂ ಮುನ್ನವೇ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರದ ಜಟಾಪಟಿ ನಡೆಯುತ್ತಿದೆ. ಇದಕ್ಕೆ ಅಂತ್ಯ ಹಾಡಲು ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಪಂಜಾಬ್‌ಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ನಿರ್ಧಿರಿಸಿದೆ. ಗುರುವಾರ, ಜಲಂಧರ್‌ನ ಆನ್‌ಲೈನ್‌ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶೀಘ್ರದಲ್ಲೇ ಪಂಜಾಬ್‌ ಕಾಂಗ್ರೆಸ್‌ನ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ

ಮೂಡುಬಿದಿರೆ: ಅಪಘಾತದಲ್ಲಿ ಗಾಯಗೊಂಡಿದ್ದ ಯುವ ಕ್ರಿಕೆಟ್ ಆಟಗಾರ ಸಾವು

ಮೂಡುಬಿದಿರೆ: ಎರಡು ವಾರಗಳ ಹಿಂದೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ ಶಿರ್ತಾಡಿ ಯುವಕ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಶಿರ್ತಾಡಿ ಕಜೆ ನಿವಾಸಿ ವಿಕೇಶ್ (22) ಮೃತಪಟ್ಟ ಯುವಕ. ಎರಡು ವಾರಗಳ ಹಿಂದೆ ಪಡುಕೊಣಾಜೆ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ವಿಕೇಶ್ ಶಿರ್ತಾಡಿ ಹಾಗೂ ವಾಲ್ಪಾಡಿ ತಂಡಗಳ

ಸ್ಪಂದನಾಶೀಲ ಇರುವಂತಹ ಸರ್ಕಾರ ನಮ್ಮದು :ಸಚಿವ ಸುನೀಲ್ ಕುಮಾರ್

ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಇಂದಿಗೆ 6 ತಿಂಗಳು ಪೂರ್ಣಗೊಂಡಿದೆ. ಸ್ಪಂದನಾಶೀಲ ಇರುವಂತಹ ಸರ್ಕಾರ ನಮ್ಮದು. ಸರ್ಕಾರದ ಎಲ್ಲಾ ಅನುದಾನಗಳನ್ನು ಮತ್ತು ಎಲ್ಲಾ ಇಲಾಖೆಯ ಯೋಜನೆಗಳನ್ನು ಮಂಗಳೂರಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಹೇಳಿದರು. ಅವರು ದ.ಕ. ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಕದ್ರಿಯ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದೊಂದಿಗೆ

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿಡಬೇಕೆಂಬುವುದು ಬಿಜೆಪಿ ಮಹಾನಗರ ಪಾಲಿಕೆ ನಿರ್ಣಯ : ಸಚಿವ ವಿ ಸುನೀಲ್ ಕುಮಾರ್

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರಿಡಬೇಕೆಂಬುವುದು ಬಿಜೆಪಿ ಮಹಾನಗರ ಪಾಲಿಕೆ ನಿರ್ಣಯ. ಕಾನೂನು ಬದ್ಧವಾಗಿ ಮಾಡಬೇಕು ಎನ್ನುವ ದೃಷ್ಟಿಯಿಂದ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಅದು ಅಂತಿಮ ಹಂತದಲ್ಲಿದೆ. ವೃತ್ತಕ್ಕೆ ನಾರಾಯಣಗುರುಗಳ ಹೆಸರು ಅಧಿಕೃತವಾಗಿ ಶೀಘ್ರದಲ್ಲಿ ಆಗಬೇಕು. ಅದೊಂದು ಸುಂದರವಾದ ನಾಮಕರಣ ಕಾರ್ಯಕ್ರಮ ಆಗಬೇಕು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ

ಎನ್ ಟಿಪಿಸಿ ಪರೀಕ್ಷೆ ಕಿಡಿ; ಪಾಟ್ನಾದ ಖಾನ್ ಸರ್ ಬಂಧನ

ಆರ್‌ಆರ್‌ಬಿ-ಎನ್‌ಟಿಪಿಸಿ ಪರೀಕ್ಷೆಗಳ ವಿರುದ್ಧ ವಿವಿಧೆಡೆ ನಡೆದ ಪ್ರತಿಭಟನೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಜನಪ್ರಿಯ ಯೂ ಟ್ಯೂಬರ್ ಖಾನ್ ಸರ್ ಮತ್ತು ಐವರು ಶಿಕ್ಷಕರ ವಿರುದ್ಧ ಬಿಹಾರದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಪಾಟ್ನಾದಲ್ಲಿ ನೆಲೆಸಿರುವ ಖಾನ್‌, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಪಾಟ್ನಾದಲ್ಲಿ ಸೋಮವಾರ ಆಕಾಂಕ್ಷಿಗಳು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ

5.0 ತಂತ್ರಜ್ಞಾನ ಯುಗದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮಹತ್ವದ್ದು: ಐಐಎಂ ನಿರ್ದೇಶಕ ಡಾ. ಹೃಷಿಕೇಶ ಟಿ. ಕೃಷ್ಣನ್

ಬೆಂಗಳೂರು, ಜ 27; ನಾವೀಗ 5.0 ತಂತ್ರಜ್ಞಾನ ಯುಗದಲ್ಲಿದ್ದು, ಇಂತಹ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ರೂಢಿಸಿಕೊಳ್ಳುವಂತೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ – ಐಐಎಂ ನಿರ್ದೇಶಕ ಡಾ. ಹೃಷಿಕೇಶ ಟಿ ಕೃಷ್ಣನ್ ಕರೆ ನೀಡಿದ್ದಾರೆ. ಆರ್.ವಿ. ಇನ್ಸ್ಟಿಟ್ಯೂಟ್ ನ 23 ನೇ ಬ್ಯಾಚ್ ಎಂ.ಬಿ.ಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೀಗ ಅಮೆರಿಕಾ ಭಯೋತ್ಪಾದಕ ದಾಳಿ,

ದೆಹಲಿಯ ವಿವಿ ಹಂಸರಾಜ್ ಕಾಲೇಜು ಕ್ಯಾಂಪಸ್‌ನಲ್ಲಿ ಗೋಶಾಲೆಗೆ ವಿದ್ಯಾರ್ಥಿ ಫೆಡರೇಶನ್ ಆಕ್ಷೇಪ

ದೆಹಲಿ ವಿವಿಯ ಹಂಸರಾಜ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಮಹಿಳಾ ಹಾಸ್ಟೆಲ್ ಗೆ ಮೀಸಲಾದ ಸ್ಥಳದಲ್ಲಿ ಗೋರಕ್ಷಣೆ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಗೋವಿನ ವೈವಿಧ್ಯತೆಗಳ ಕುರಿತ ಸಂಶೋಧನೆ ನಡೆಸುವುದು ಕಾಲೇಜಿನ ಉದ್ದೇಶ ಎಂದು ಹೇಳಲಾಗಿದೆ. ಆದರೆ ಹಸುವನ್ನು ಸಾಕಿ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಕಾಲೇಜು, ಇದರಿಂದ ವಿದ್ಯಾರ್ಥಿಗಳಿಗೆ ಶುದ್ಧ ಹಾಲು ಮತ್ತು ತುಪ್ಪ ನೀಡುತ್ತೇವೆ. ಕಾಲೇಜು ಗೋಬರ್ ಅನಿಲ ಘಟಕವನ್ನು

ಬಜೆಟ್ 2022: ಸುಸ್ಥಿರ ಕೃಷಿ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಏಕೆ ಶ್ರಮಿಸಬೇಕು?

ಭಾರತೀಯ ಕೃಷಿ ಕ್ಷೇತ್ರದ ಸುಸ್ಥಿರತೆಯು ಬೆಳೆಗಳ ಆಯ್ಕೆ, ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನದ ಆಯ್ಕೆಗಳನ್ನು ಅವಲಂಬಿಸಿರುತ್ತದೆ. ಇದನ್ನು ಬದಲಾಗುತ್ತಿರುವ ಹವಾಮಾನದೊಂದಿಗೆ ಹೊಂದಿಕೊಳ್ಳುವಂತೆ ಉತ್ತೇಜಿಸಲು ಆರ್ಥಿಕ ಬಂಬಲದ ಅಗತ್ಯವಿದೆ. ಇದಕ್ಕಾಗಿ, ಸುಸ್ಥಿತ ಕೃಷಿ ವಾತಾವರಣವನ್ನು ಚೇತರಿಸುವ ಬಜೆಟ್‌ ಬೇಕಾಗಿದೆ. ಹಸಿರು ಕ್ರಾಂತಿಯು ಜಗತ್ತನ್ನು ಮತ್ತು ಭಾರತವನ್ನು ಆಹಾರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದೆ. ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ

ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ನ್ಯಾಯಾಧೀಶರ ವಿರುದ್ದ ಕ್ರಮಕ್ಕೆ ಕೊಪ್ಪಳ ಬಾರ್‌ ಕೌನ್ಸಿಲ್‌ ಆಗ್ರಹ

ಕೊಪ್ಪಳ: ಗಣರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಯಚೂರಿನ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಎಂ.ಸಿ. ಪಾಟೀಲ್‌ (ಮಲ್ಲಿಕಾರ್ಜುನಗೌಡ) ಅವರ ವಿರುದ್ಧ ಸೂಕ್ತ ಹಾಗೂ ಕಠಿಣ ಕ್ರಮ ಜರುಗಿಸಬೇಕು ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘ ಗೊತ್ತುವಳಿ ಸ್ವೀಕರಿಸಿದೆ. ನೂತನ ಅಧ್ಯಕ್ಷ ಎ.ವಿ. ಕಣವಿ ಅಧ್ಯಕ್ಷತೆಯಲ್ಲಿ ಗುರುವಾರ ತುರ್ತು ಸಭೆ ಸೇರಿಸಲಾಗಿತ್ತು, ಈ
How Can We Help You?