ಶ್ವಾಕ್ ತಗುಲಿ ವಿದ್ಯುತ್ ಕಂಬದಿಂದ ಬಿದ್ದು ಗಂಭೀರ ಗಾಯ
ವಿದ್ಯುತ್ ಪ್ರವಹಿಸುತ್ತಿದ್ದ ವಿದ್ಯುತ್ ಕಂಬಕೇರಿದ ಗುತ್ತಿಗೆ ಕಾರ್ಮಿಕನೋರ್ವ ವಿದ್ಯುತ್ ಶ್ವಾಕ್ ನಿಂದ ಕಂಬದಿಂದ ಕೆಳಗೆಬಿದ್ದು ಗಂಭೀರ ಗಾಯಗೊಂಡ ಘಟನೆ ಪಡುಬಿದ್ರಿಯ ನಡಿಪಟ್ಣ ಎಂಬಲ್ಲಿ ನಡೆದಿದೆ.
ಕಡಲು ಕೊರೆತ ಹಿನ್ನಲೆಯಲ್ಲಿ ಕಂಬ ಬದಲಿಸುವ ಗುತ್ತಿಗೆಯನ್ನು ಕಾರ್ಕಳ ಮೂಲದ ಅಕ್ಷತ್ ಕುಮಾರ್ ಎಂಬವರಿಗೆ ನೀಡಿದ್ದು, ಅವರ ಸೂಚನೆಯಂತೆ ಕಾರ್ಕಳ ಮೂಲದ ರಕ್ಷಿತ್(27) ಕೆಲಸಕ್ಕಾಗಿ ಬಂದಿದ್ದು, ಪಡುಬಿದ್ರಿ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿ ಇವರಿಗೆ ನೀಡ ಬೇಕಾಗಿದ್ದರೂ ಕರ್ತವ್ಯ ಲೋಪ ವೆಸಗಿದ್ದ ಹಿನ್ನಲೆಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಂಬವೇರಿದ ಇಬ್ಬರಲ್ಲಿ ಒರ್ವನಿಗೆ ವಿದ್ಯುತ್ ಶ್ವಾಕ್ ತಗುಲಿ ಪಕ್ಕದಲ್ಲೇ ಇದ್ದ ವಿದ್ಯುತ್ ಸಲಕರಣೆ ತಂದ ಲಾರಿಯ ಮೇಲೆ ಬಿದ್ದು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಪಡುಬಿದ್ರಿ ಮೆಸ್ಕಾಂ ನ ಕರ್ತವ್ಯ ಲೋಪದ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.