ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾ ಸಂಸ್ಥೆ ಆಲಂಗಾರು ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಅಬಾಲ್ ಪಂದ್ಯಾಟವು ಆಲಂಗಾರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.

ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ದೀಪ ಬೆಳಗಿಸಿ, ವಾಲಿಬಾಲ್‍ನ್ನು ರಿಬ್ಬನ್‍ನಿಂದ ಬೇ ರ್ಪಡಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ ವರಾತನಾಡಿ ವಿದ್ಯಾರ್ಥಿ ಜೀವ ನದಲ್ಲಿ ಕ್ರೀಡೆ ಬಹುಮುಖ್ಯ ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ ಆದ್ದರಿಂದ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಸೋಲು ಬದುಕಿನ ಕೊನೆಯಲ್ಲವಾದ್ದರಿಂದ ಸೋಲನ್ನು ಗೆಲುವಾಗಿ ಪರಿವರ್ತಿಸುವ ಮೂಲಕ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತ್ತಾಗಲಿ ಎಂದು ಶುಭ ಹಾರೈಸಿದರು.

District level volleyball tournament at Moodbidire

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಟ್ರೋಫಿಯನ್ನು ಅನಾವರಣಗೊಳಿಸಿ ಶುಭಹಾರೈಸಿದರು.

ಆಲಂಗಾರು ಚರ್ಚಿನ ಧರ್ಮಗುರು, ಶಾಲೆಯ ಸಂಚಾಲಕ ರ ಪಾ. ವಾಲ್ಟರ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯೊಂದಿಗೆ ಒಗ್ಗಟ್ಟಾಗಿ ಪಂದ್ಯಾಟದಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.

District level volleyball tournament at Moodbidire

ಪುರಸಭಾ ಸದಸ್ಯ ಪಿ.ಕೆ.ಗೋಮಸ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುನೀಲ್ ಮಿರಾಂದ, ರಾಜೇಶ್ ಕಡಲಕೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಆಲಂಗಾರು ಸಂತ ಥೋಮಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿಲ್ವೇಯಾ ಡೇಸಾ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಭುವನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈ.ಶಿ.ಶಿ. ನವೀನ್ ಅಂದೂರಿ ಕಾರ್ಯಕ್ರಮ ನಿರೂಪಿಸಿದರು. ದೈ.ಶಿ.ಶಿ.ಉದಯಕುಮಾರ್ ವಂದಿಸಿದರು.

Related Posts

Leave a Reply

Your email address will not be published.