ಕೋವಿಡ್ ಸಮಯದ ಸೇವೆ : ಡಾ.ಸೌರಭ ಕುಂಟಿನಿಗೆ ಸನ್ಮಾನ

ಕೋವಿಡ್ ಸಮಯದಲ್ಲಿ ವೈದ್ಯರ ಅಗಾಧ ಸೇವೆಯನ್ನುಪರಿಗಣಿಸಿ ರಾಜಸ್ಥಾನ್ ಹರ್ಬಲ್ ಕಂಪೆನಿಯವರು ಕೊಪ್ಪಳ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾದ ಡಾಕ್ಟರ್ ಸೌರಭಾ ಜಯರಾಮ್ಇ ವರನ್ನು ಗುರುತಿಸಿ ಸನ್ಮಾನಿಸಿದರು…ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾಕ್ಟರ್ ಕೆ.ಬಿ ಹಿರೇಮಠ್, ಡಾಕ್ಟರ್ ಮಂಜುನಾಥ ಅಕ್ಕಿ, ಡಾಕ್ಟರ್ ವೀರೇಂದ್ರ ಹಟ್ಟಿ, ಡಾಕ್ಟರ್ ಕಿಶೋರ್ ರಜಪೂತ್ ಮುಂತಾದವರು ಉಪಸ್ಥಿತರಿದ್ದರು.

ಇವರು ಸುಳ್ಯದ ಕೆ.ವಿ.ಜಿ ಯಲ್ಲಿ 5 ವರುಷಗಳ ಶಿಕ್ಷಣವನ್ನು ಪೂರೈಸಿ ಬಿ.ಎ.ಎಮ್.ಎಸ್ ಪದವಿಯನ್ನು ಪಡೆದು ಸಂಸ್ಕೃತ ದಲ್ಲಿ ರಾಂಕ್ ಪಡೆದಿರುತ್ತಾರೆ…. ಪ್ರಥಮ ವರ್ಷದ ಎಂ.ಡಿ ಯನ್ನು ಕ್ರಿಯಾ ಶರೀರ ವಿಭಾಗದಲ್ಲಿ ಶ್ರೀ ಗವಿ ಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ರೀಸರ್ಚ್ ಸೆಂಟರ್ ಗವಿಮಠ ಕ್ಯಾಂಪಸ್ ಕೊಪ್ಪಳದಲ್ಲಿ ಇದ್ದು ಶಿಕ್ಷಣವನ್ನೂ ಪಡೆಯುತ್ತಿದ್ದಾರೆ..ಇವರು ಭರತನಾಟ್ಯ ಜ್ಯೂನಿಯರನ್ನು ಬಾಲಕೃಷ್ಣ ಮಂಜೇಶ್ವರ ಇವರಲ್ಲಿ, ಶಾಸ್ತ್ರೀಯ ಸಂಗೀತವನ್ನು ಜ್ಯೂನಿಯರ್ ಹಾಗೂ ಸೀನಿಯರನ್ನು ಕುದ್ಮಾರು ಶ್ರೀ ವೆಂಕಟ್ರಾಮನ್ ಇವರಲ್ಲಿಯೂ ಅಭ್ಯಸಿಸಿರುತ್ತಾರೆ…ಅದೇ ರೀತಿ ಕವನ ಬರೆಯುವುದು ಅನೇಕ ಕಡೆಗಳಲ್ಲಿ ಕವಿಗೋಷ್ಠಿ ಹಾಗೂ ಹಾಡು ಹಾಗೂ ನೃತ್ಯವನ್ನೂ ಕೊಟ್ಟಿರುತ್ತಾರೆ.. ಅದೇ ರೀತಿ ಇವರು ಸತ್ಯಶಾಂತ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

Related Posts

Leave a Reply

Your email address will not be published.