ಪುತ್ತೂರು: ಶಾಂತಿಗೋಡಿನ ಪಂಜಿಗ ತೋಟಕ್ಕೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಕೃಷಿಗೆ ಹಾನಿ

ಪುತ್ತೂರು: ಕಳೆದ ಎರಡು ದಿನಗಳಿಂದ ಬೆಳ್ಳಿಪ್ಪಾಡಿ ಗ್ರಾಮ ಮತ್ತು ಶಾಂತಿಗೋಡು ಗ್ರಾಮದ ನಡುವೆ ಸುತ್ತಾಡುತ್ತಿರುವ ಕಾಡಾನೆಗಳೆರಡು ಇದೀಗ ಶಾಂತಿಗೋಡು / ಚಿಕ್ಕಮುಡ್ನೂರು ಗ್ರಾಮದ ನಡುವೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಂತಿಗೋಡು ಗ್ರಾಮದ ಪಂಜಿಗದಲ್ಲಿ ಆನೆ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಬೆಳ್ಳಿಪ್ಪಾಡಿ ಕೊಡಿಮರದಿಂದ ಹೊಳೆ ದಾಟಿದ ಆನೆ ಅಲ್ಲಿಂದ ಬೆದ್ರಾಳ ತೋಡು ಮೂಲಕ ಚಿಕ್ಕಮುಡ್ನೂರು ಗ್ರಾಮದ ಧನ್ಯ ಕುಮಾರ್ ಜೈನ್ ಎಣಿಮೊಗರು ಅವರ ತೋಟದಲ್ಲಿ ಹೋಗಿದೆ.

ಅಲ್ಲಿಂದ ಮುಂದೆ ಶಾಂತೊಗೋಡು ಗ್ರಾಮದ ಪಂಜಿಗ ವಸಂತಕುಮಾರ್ ಪಂಜಿಗ ಅವರ ತೋಟ ಸಹಿತ ಇತರ ಸ್ಥಳೀಯರ ತೋಟದ ಮೂಲಕ ಭಜನಾ ಮಂದಿರ ಪಕ್ಕದಲ್ಲಿರುವ ಕಾಡನ್ನು ಸೇರಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
