ಮಂಗಳಪೇಟೆಯ ಫಾಝಿಲ್ ಮನೆಗೆ ಭೇಟಿ ನೀಡಿದ SDPI ನಿಯೋಗ

ಮಂಗಳೂರು: ಇತ್ತೀಚೆಗೆ ಸುರತ್ಕಲ್ ಪೇಟೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಯುವಕ ಫಾಝಿಲ್ ರವರ ಮನೆಗೆ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆಯವರ ನೇತೃತ್ವದ ನಿಯೋಗವು ಭೇಟಿ ನೀಡಿ ಫಾಝಿಲ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ದೈರ್ಯ ತುಂಬಲಾಯಿತು, ಕುಟುಂಬದೊಂದಿಗೆ ಪಕ್ಷವು ಸದಾ ಇರಲಿದೆ ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ, ದೈರ್ಯ ಕಳೆದುಕೊಳ್ಳದೇ ಕಾನೂನಿನ ಮೇಲೆ ನಂಬಿಕೆ ಇಟ್ಟು ಕಾನೂನು ಹೋರಾಟ ಮಾಡಿ ಕೊಲೆಗಟುಕರಿಗೆ ಕಾನೂನಿನ ಅಡಿಯಲ್ಲಿ ಗರಿಷ್ಟ ಶಿಕ್ಷೆ ನೀಡುವವರೆಗು ವಿರಮಿಸಬಾರದು ಅದಕ್ಕಾಗಿ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಫಾಝಿಲ್ ತಂದೆ ಹಾಗೂ ಕುಟುಂಬದ ಸದಸ್ಯರಿಗೆ ಇಲ್ಯಾಸ್ ತುಂಬೆ ಭರವಸೆ ನೀಡಿದರು ಈ ಸಂದರ್ಭದಲ್ಲಿ SDPI ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ , ರಾಜ್ಯ ನಾಯಕರಾದ ಜಲೀಲ್ ಕೆ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ , ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ , ಮೂಡಬಿದ್ರೆ ಅಸೆಂಬ್ಲಿ ಸಮಿತಿಯ ಅಧ್ಯಕ್ಷರಾದ ಆಸಿಫ್ ಕೋಟೆಬಾಗಿಲು ಹಾಗೂ ಸ್ಥಳೀಯ ಮುಖಂಡರು ಕಾರ್ಯಕರ್ತರು ಜತೆಗಿದ್ದರು
