ಮೀನುಗಾರಿಕೆಗೆಂದು ಹಾಕಿದ್ದ ಬಲೆಗೆ ಹಾನಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ದೊಡ್ಡ ದೊಡ್ಡ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಮೊಗವೀರಪಟ್ಟಣದಲ್ಲಿ ಮೀನುಗಾರಿಕೆಗೆಂದು ಹಾಕಿದ್ದ ಬಲೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಕಲ್ಲಿಗೆ ಸಿಲುಕಿ ಹಾನಿಯಾಗಿದೆ.
ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿತ್ತು. ಈ ನಡುವೆ ಸ್ಥಳೀಯ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಲಿದ್ದ ಕೆಲವು ದೋನಿಗಳು ಸಮುದ್ರದ ಅಲೆಗಳ ಕಾರಣದಿಂದ ಸಮುದ್ರದದ ದಡಕ್ಕೆ ತಲುಪಲು ಸಮುದ್ರದಾಲೆಗಳು ಕಡಿಮೆಯಾಗುವವರೆಗೆ ಕಾಯಬೇಕಾಯಿತು. ಮೊಗವೀರಪಟ್ಣದಲ್ಲಿ ಅಶ್ವಿನ್ ಅವರು ಸಮುದ್ರದಲ್ಲಿ ಮೀನಿಗಾಗಿ ಬೀಸಿದ್ದ ಬಲೆ ಸಮುದ್ರದ ಅಲೆಗೆ ಸಿಲುಕಿ ದಡಕ್ಕೆ ಬಂದಿದ್ದು, 10 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.
