“ಹರೇಕಳ ಗ್ರಾಮ ಸೌಧ” ಉದ್ಘಾಟನೆ

ಉಳ್ಳಾಲದ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟನೆ ನಡೆಯಿತು. ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟಿಸಿದರು. ನಂತರ ಮಾತನಡಿದ ಅವರು ಗ್ರಾಮ ಪಂಚಾಯಿತಿ ಕಚೇರಿ ಎಂಬುವುದು ಗ್ರಾಮದ ಆತ್ಮ.ಹರೇಕಳ ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿ ಮೂಲಕ ಮಾದರಿಯಾಗಿ ರೂಪುಗೊಳ್ಳುತ್ತಿದ್ದು ಇನ್ನೂ ಅಭಿವೃದ್ಧಿ ಆಗಬೇಕೆನ್ನುವ ನೆಲೆಯಲ್ಲಿ ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಬೇಕು.ಆ ದಿಸೆಯಲ್ಲಿ ಪಂಚಾಯತ್ ರಾಜ್ ಇತಿಹಾಸದಲ್ಲಿ ಗ್ರಾಮೀಣ ಭಾಗದಲ್ಲಿ ಹರೇಕಳ ಗ್ರಾಮ ಪಂಚಾಯಿತಿ ಕಚೇರಿಕಟ್ಟಡ ಹರೇಕಳ ಗ್ರಾಮ ಸೌಧದಂತಹ ಸೌಧ ಎಲ್ಲೂ ನಿರ್ಮಾಣ ಆಗಿಲ್ಲ ಎಂದು ಹೇಳಿದರು.

ಪಂಚಾಯಿತಿ ಅಧ್ಯಕ್ಷ ಬದ್ರುದ್ದಿನ್ ಹರೇಕಳ ಫರೀದ್ ನಗರ ಪ್ರಾಸ್ತವಿಕ ಮಾತುಗಳನ್ನಾಡಿದರು.ಕಟ್ಟಡ ಉದ್ಘಾಟನೆಯ ಮುನ್ನ ಬೆಳಗ್ಗೆ ಪಂಚಾಯಿತಿ ವಠಾರದಲ್ಲಿ ನಿರ್ಮಿಸಲಾದ ಧ್ವಜಸ್ತಂಭವನ್ನು ಧ್ವಜರೋಹಣಗೈದು ಉದ್ಘಾಟಿಸಿದ್ದರು. ಇದೇ ಸಂದರ್ಭ ಅಮೃತ ಉದ್ಯಾನವನ, ಮಹಾತ್ಮಾ ಗಾಂಧಿ ಸಭಾಂಗಣ, ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಸೌಧ ನಿರ್ಮಾಣದ ರೂವಾರಿ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಹಾಗೂ ವಿವಿಧ ರೂಪದಲ್ಲಿ ಸಹಕರಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಉದ್ಯಮಿ ನಶಲ್ ಎಂ. ಸಲೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ, ಜಿ.ಪಂ ಮಾಜಿ ಸದಸ್ಯ ಎನ್. ಎಸ್. ಕರೀಂ, ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮಾಜಿ ಸದಸ್ಯರುಗಳಾದ ಮುಸ್ತಫಾ ಹರೇಕಳ, ಟಿ.ಎಸ್. ಅಬ್ದುಲ್ಲ, ಮಂಗಳೂರು ತಾ. ಪಂ. ಕಾರ್ಯನಿರ್ವಹಣಾ ಅಧಿಕಾರಿ ನಾಗರಾಜ್, ಉಳ್ಳಾಲ ತಾಲೂಕು ಪಂಚಾಯಿತಿ ಇಒ ರಾಜಣ್ಣ, ಗ್ರಾಮ ಸೌಧ ಗುತ್ತಿಗೆದಾರ ಇಂತಿಯಾಝ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.
