ಹಿರಿಯ ನಾಗರಿಕರಿಗಾಗಿ ಉಚಿತ ಹೃದಯ ತಪಾಸಣಾ ಶಿಬಿರ

ಸೇವಾಭಾರತಿ(ರಿ),ಮಂಗಳೂರು ಇದರ ಸೇವಾ ಪ್ರಕಲ್ಪವಾದ `ಅನಂತಸೌಖ್ಯ” ಹಾಗೂ ಕೆ.ಎಂ.ಸಿ,ಆಸ್ಪತ್ರೆ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಮಂಗಳೂರು ಹಿರಿಯ ನಾಗರಿಕರ ಸಂಘ ಇವರ ಸಹಯೋಗದೊಂದಿಗೆ, ಹಿರಿಯ ನಾಗರಿಕರಿಗಾಗಿ ಉಚಿತ“ಹೃದಯತಪಾಸಣಾ ಶಿಬಿರ”ವು, ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ವಠಾರದಲ್ಲಿ ನಡೆಯಿತು

ಶಿಬಿರವನ್ನು, ಡಾ.ಪದ್ಮನಾಭಕಾಮತ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಹೃದಯಚಿಕಿತ್ಸಾ ವಿಭಾಗ, ಕೆ.ಎಂ.ಸಿ,ಆಸ್ಪತ್ರೆ,ಮಂಗಳೂರುಇವರು ದೀಪ ಬೆಳಗಿಸಿ ಉದ್ಘಾಟಿಸಿದರು.ಡಾ.ಕಾಮತ್‍ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಹಿರಿಯ ನಾಗರಿಕರಲಿ ್ಲಉಂಟಾಗುವ ಅಭದ್ರತೆಯನ್ನು ನಿವಾರಿಸುವುದಕ್ಕೆ ಇಂತ ಶಿಬಿರಗಳು ಪರಿಣಾಮಕಾರಿಎಂದು ಹೇಳಿದರು.ಕೋವಿಡ್ ನಂತರದಕಾಲಘಟ್ಟದಲ್ಲಿಅವರಿಗಾಗಿಯೇ ಆಯೋಜಿಸಿದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಸೇವಾಭಾರತಿ ಸಂಸ್ಥೆಯಶ್ರೀ ಹೆಚ್.ನಾಗರಾಜ ಭಟ್‍ಅವರು ಸಂಸ್ಥೆಯ ಚಟುವಟಿಕೆಗಳನ್ನು ವಿವರಿಸಿದರು. ವೇದಿಕೆಯಲ್ಲಿ, ಸೇವಾಭಾರತಿ ಸಂಸ್ಥೆಯಗೌರವ ಕಾರ್ಯದರ್ಶಿ, ಶ್ರೀ ಹೆಚ್.ನಾಗರಾಜ ಭಟ್, ಕೋಶಾಧಿಕಾರಿ ಶ್ರೀ ವಿನೋದ್ ಶೆಣೈ, ಡಾ.ಪದ್ಮನಾಭಕಾಮತ್, ಡಾ. ಕಾರ್ತಿಕ್, ಕಾರ್ಯಕ್ರಮ ಸಂಯೋಜಕರಾದ ಶ್ರೀ ಹರ್ಬರ್ಟ್, ಮಂಗಳೂರು ಹಿರಿಯ ನಾಗರಿಕರ ಸಂಘದಉಪಾಧ್ಯಕ್ಷರಾದ ಶ್ರೀ ರಮೇಶ್‍ರಾವ್,ಶ್ರೀ ಉಮೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.

ಡಾ.ಪದ್ಮನಾಭಕಾಮತ್ ಹಾಗೂ ತಂಡದವರು ನಡೆಸಿಕೊಟ್ಟ ಕಾರ್ಯಕ್ರಮದ ನೇತೃತ್ವವನ್ನು , “ಅನಂತಸೌಖ್ಯ” ದ ಸಂಚಾಲಕರಾದ ಶ್ರೀ ಉಮೇಶ್ ಶಣೈಅವರು ವಹಿಸಿದ್ದರು. ಎಕೋಕಾರ್ಡಿಯೋಗ್ರಾಂ, ಟ್ರೆಡ್ ಮಿಲ್‍ಇತ್ಯಾದಿ ಪರೀಕ್ಷೆಗಳನ್ನು ಮಂಗಳೂರು ಹಿರಿಯ ನಾಗರಿಕರ ಸಂಘದ ಸಹಕಾರದಿಂದ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿಕೆ.ಎಂ.ಸಿ,ಆಸ್ಪತ್ರೆ, ಮಂಗಳೂರು ಇದರ ಸಿಬ್ಬಂದಿ ವರ್ಗ, ಸೇವಾ ಭಾರತಿಯ ವಿಶ್ವಸ್ಥರು, ಸ್ವಯಂಸೇವಕರು, ಚೇತನಾ ಶಾಲಾ ಸಿಬ್ಬಂದಿಯವರು ಸಹಕರಿಸಿದರು. ಸುಮಾರು 115 ಮಂದಿ ಹಿರಿಯ ನಾಗರಿಕರು ಶಿಬಿರÀದ ಪ್ರಯೋಜನ ಪಡೆದರು.

Related Posts

Leave a Reply

Your email address will not be published.