ಬೀಟ್ ಪೊಲೀಸ್ ಸಭೆ : ಅನೈತಿಕ ಚಟುವಟಿಕೆಗಳ ತಾಣ ಹೆಜಮಾಡಿ ಬಂದರು

ಹೆಜಮಾಡಿಯ ಮೀನುಗಾರಿಕಾ ಬಂದರು ಪ್ರದೇಶ ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಈ ಬಗ್ಗೆ ಪಡುಬಿದ್ರಿ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹೆಜಮಾಡಿ ಬಂದರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಬೀಟ್ ಪೊಲೀಸ್ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರೊರ್ವರು, ಶನಿವಾರ ಹಾಗೂ ಭಾನುವಾರ ಅತೀ ಹೆಚ್ಚು ಮಣಿಪಾಲ ಕಡೆಯಿಂದ ಜೋಡಿಗಳು ಬರುತ್ತಿದ್ದು , ಅವರಿಂದ ಈ ಪ್ರದೇಶಕ್ಕೆ ಕೆಟ್ಟ ಹೆಸರು ಬರುವಂತ್ತಾಗಿದೆ ಅದಲ್ಲದೆ, ಬೀಟ್ ಪೊಲೀಸ್ ಸಭೆ ಕಾಟಾಚಾಕ್ಕಾಗಿ ನಡೆಸದೆ ಗ್ರಾಮದಲ್ಲಿ ಸರಿಯಾದ ಪ್ರಚಾರ ನಡೆಸಿ ಮಾಡುವ ಮೂಲಕ ಗ್ರಾಮದ ಬಹುತೇಕ ಮಂದಿ ಈ ಸಭೆಗೆ ಹಾಜರಾಗುವಂತೆ ಮಾಡ ಬೇಕಾಗಿದೆ ಎಂದರು.
ಇದೇ ಸಂದರ್ಭ ಮಂಗಳೂರಿನಲ್ಲಿ ನಡೆಯುತ್ತಿರುವ ಗಲಭೆಗಳಿಂದಾಗಿ ಟೋಲ್ ಗೇಟ್ ಬಳಿಯ ಅಂಗಡಿಗಳನ್ನು ರಾತ್ರಿ ಹತ್ತು ಗಂಟೆಗೆ ಮುಂದಿನ ಆದೇಶದ ವರಗೆ ಮುಚ್ಚುವಂತೆ ಪೊಲೀಸರು ಸಭೆಯಲ್ಲಿ ಹಾಜರಿದ್ದ ಅಂಗಡಿ ಮಾಲಕರಿಗೆ ಸೂಚನೆ ನೀಡಿದ್ದು, ಅದಕ್ಕೆ ಅಂಗಡಿ ಮಾಲಕರು ಸಮ್ಮತಿ ಸೂಚಿಸಿದ್ದಾರೆ. ಕನ್ನಂಗಾರು ಬಳಿಯ ಹೊಟೇಲ್ ವೊಂದರ ಮುಂಭಾಗ ಲಾರಿಗಳು ಹೆದ್ದಾರಿಗಟ್ಟಿಕೊಂಡೇ ಪಾರ್ಕ್ ಮಾಡುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹ ಕೇಳಿ ಬಂದಿದೆ. ಸಭೆಯ ಅಧ್ಯಕ್ಷತೆಯನ್ಬು ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ ವಹಿಸಿದ್ದು, ಉಪಾಧ್ಯಕ್ಷೆ ಪವಿತ್ರ ಗಿರೀಶ್, ಪಡುಬಿದ್ರಿ ಎಎಸ್ಸೈ ಸುರೇಶ್ ಭಟ್ ಹಾಗೂ ಪೊಲೀಸ್ ಸಿಬ್ಬಂದಿ ಕೋಟ್ಯಪ್ಪ ಉಪಸ್ಥಿತರಿದ್ದರು.
