ಉಳ್ಳಾಲ : ಗೋವಿಗಾಗಿ ಮೇವು ಮೆರವಣಿಗೆ ವೇಳೆ ಘರ್ಷಣೆಗೆ ಪ್ರಚೋದನೆ

ಗೋವಿಗಾಗಿ ಮೇವು ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಮುಂದೆ ನಿಂತು ಅಶಾಂತಿಗೆ ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

hindhu muslim

ನ.6 ರಂದು ಸಂಜೆ 4.30 ರ ವೇಳೆಗೆ ಕುತ್ತಾರು ಮದನಿನಗರ ಜುಮಾ ಮಸೀದಿ ಎದುರುಗಡೆ ವಾಹನಗಳನ್ನು ನಿಲ್ಲಿಸಿದ ಕಿಡಿಗೇಡಿಗಳು ಮುಸ್ಲಿಂ ಬಾಂಧವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಬಾವುಟವನ್ನು ಪ್ರದರ್ಶಿಸಿ ಶಾಂತಿಭAಗ ಹಾಗೂ ಘರ್ಷಣೆಗೆ ಪ್ರಚೋದಿಸಿದ್ದಾರೆ.

hindhu muslim

ಕದ್ರಿ ದೇವಸ್ಥಾನದಿಂದ ಪಜೀರು ಗೋವನಿತಾಶ್ರಯದವರೆಗೆ ಗೋವಿಗಾಗಿ ಮೇವು ಕಾರ್ಯಕ್ರಮದ ಪ್ರಯುಕ್ತ ಕದ್ರಿಯಿಂದ ಪಜೀರು ಗೋವನಿತಾಶ್ರಯ ತನಕ ವಿ.ಹಿಂ.ಪ ಮೆರವಣಿಗೆಯನ್ನು ಆಯೋಜಿಸಿತ್ತು. ಈ ನಡುವೆ ಮೆರವಣಿಗೆಯಲ್ಲಿದ್ದ ಕೆಲ ಕಿಡಿಗೇಡಿಗಳು ಮದನಿನಗರ ಮಸೀದಿ ಎದುರುಗಡೆ ವಾಹನಗಳನ್ನು ನಿಲ್ಲಿಸಿ ದುಷ್ಕöÈತ್ಯ ಎಸಗಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತರ ಸಮಿತಿ ಆರೋಪಿಸಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

hindhu muslim

ನಿಯೋಗದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ತಾ.ಪಂ ಮಾಜಿ ಅಧ್ಯಕ್ಷ ಮೋನು ಮಲಾರ್, ಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಆರ್ ಕೆ.ಸಿ ಅಝೀಝ್, ಮುನ್ನೂರು ಗ್ರಾ.ಪಂ ಸದಸ್ಯರಾದ ನವೀನ್,ಸಿರಾಜ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಝಕರಿಯಾ ಮಲಾರ್ ,ಉಳ್ಳಾಲ ಯುವಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್, ನೌಶೀದ್ ಮದನಿನಗರ, ಇಂಟಕ್ ನ ಸಿದ್ದೀಖ್, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.