ಇದು ಪ್ರತಿಯೊಬ್ಬ ಹುಡುಗಿಯ ಹೋರಾಟ – ವಿನೇಶಾ ಪೋಗಟ್
ಪ್ರತಿಯೊಬ್ಬ ಮಹಿಳೆಯು ಹೋರಾಟದಲ್ಲಿ ತೊಡಗಿದ್ದು, ತನ್ನ ಹೋರಾಟದ ದಾರಿಯನ್ನು ಆಯ್ಕೆ ಮಾಡಿಕೊಂಡು, ಮುನ್ನಡೆಯಬೇಕು ಎಂದು ಹೊಸ ಶಾಸಕಿ ಕುಸ್ತಿಪಟು ವಿನೇಶಾ ಪೋಗಟ್ ಹೇಳಿದರು.
ಇದು ಪ್ರತಿಯೊಬ್ಬ ಹುಡುಗಿಯ ಹೋರಾಟ. ಪ್ರತಿಯೊಬ್ಬ ಮಹಿಳೆಯು ತನ್ನ ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನನಗೆ ದಕ್ಕಿರುವ ಗೆಲುವು ಹೋರಾಟದ ಗೆಲುವಾಗಿದೆ, ಸತ್ಯದ ಗೆಲುವಾಗಿದೆ. ಈ ದೇಶ ನನಗೆ ನೀಡಿರುವ ಪ್ರೀತಿ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೊಸದಾಗಿ ವಿಧಾನಸಭೆ ಪ್ರವೇಶಿಸಿದ ಕುಸ್ತಿಪಟು ವಿನೇಶಾ ಪೋಗಟ್ ಹೇಳಿದರು.