ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ‘ಪಂಜದಲ್ಲಿ ನೃತ್ಯ ತರಗತಿ ಪ್ರಾರಂಭ
ಪಂಜ: ಕಲಾ ಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಇದರ ವತಿಯಿಂದ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನೃತ್ಯ ತರಗತಿಗಳನ್ನು ಉದ್ಘಾಟಿಸಿದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಇವರು”ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಪೂರಕವಾದ ನೃತ್ಯ ತರಬೇತಿ ತರಗತಿಯಿಂದ ಮಕ್ಕಳಿಗೆ ಪ್ರಯೋಜನವಾಗಲಿ”ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು”ನೃತ್ಯ ತರಬೇತಿ ಪಡೆದ ನಮ್ಮೂರಿನ ಮಕ್ಕಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ “ಎಂದು ಹಾರೈಸಿದರು.
ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಪುತ್ಯ, ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷರಾದ ಜೇಸಿ ಜೀವನ್ ಮಲ್ಕಜೆ, ವನಿತಾ ಸಮಾಜ (ರಿ) ಪಂಜ ಇದರ ಗೌರವಾಧ್ಯಕ್ಷರಾದ ಶ್ರೀಮತಿ ಪುಷ್ಪಾ ಡಿ ಕಾನತ್ತೂರು, ಹಾಗೂ ಕಲಾ ಮಂದಿರ್ ಬೆಳ್ಳಾರೆ ಸಂಸ್ಥೆಯ ನೃತ್ಯ ನಿರ್ದೇಶಕರಾದ ಪ್ರಮೋದ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಲಾಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ಅಶೋಕ್ ಬಸ್ತಿಗುಡ್ಡೆ, ಶ್ರೀ ಸತೀಶ್ ಪಂಜ, ಹಾಗೂ ನೃತ್ಯ ಶಿಕ್ಷಕಿಯರಾದ ಕುಮಾರಿ ಭಾಗ್ಯಶ್ರೀ, ಕುಮಾರಿ ನಿಶ್ಮಿತಾ, ಕುಮಾರಿ ವಿಕ್ಯ, ಶ್ರೀ ಯಕ್ಷಿತ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀ ಪ್ರಮೋದ್ ರೈ ಸ್ವಾಗತಿಸಿ, ಶ್ರೀ ಸತೀಶ್ ಪಂಜ ವಂದಿಸಿ, ಜೇಸಿ ಸೋಮಶೇಖರ ನೇರಳ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದರು.