ಪಡುಬಿದ್ರಿ :ಯುವವಾಹಿನಿ ಅಡ್ವೆ ಘಟಕದಿಂದ ಕೆಸರ್ಡೊಂಜಿ ದಿನ
ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ ಅಡ್ವೆ ಘಟಕದ ವತಿಯಿಂದ ಅಡ್ವೆ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಗದ್ದೆಯಲ್ಲಿ ಹತ್ತನೇ ವರ್ಷದ ಅಂಗವಾಗಿ ಕೆಸರ್ಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರೋಡಿಯ ಮುಖ್ಯ ಅರ್ಚಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವವಾಹಿನಿ ಅಡ್ವೆ ಘಟಕದ ಅಧ್ಯಕ್ಷ ಸಚಿನ್ ಎಸ್. ಕರ್ಕೇರ ಇವರ ನೇತ್ರತ್ವದಲ್ಲಿ ಪ್ರಪ್ರಥಮ ಬಾರಿಗೆ ಈ ಕೆಸರು ಗದ್ದೆ ಕ್ರೀಢಾಕೂಟ ಆಯೋಜಿಸಲಾಗಿದ್ದು, ಸುತ್ತಲ ಗ್ರಾಮಗಳಿಂದ ನೂರಾರು ಮಂದಿ ಭಾಗವಹಿಸಿದ್ದಾರೆ. ಕ್ರೀಡಾ ಕೂಟದಲ್ಲಿ ವೈಯಕ್ತಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವೈಯಕ್ತಿಕ ಸಹಿತ ಗುಂಪು ಸ್ಪರ್ಧೆಗಳು ಆಯೋಜಿಸಲಾಗಿದೆ.
ಅಡ್ವೆ ಯುವ ವಾಹಿನಿ ಘಟಕ ದೀನರ ಧ್ವನಿಯಾಗಿ ಸಮಜೋಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಈ ಭಾಗದಲ್ಲಿ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಬಗ್ಗೆ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ನಿತೇಶ್ ವಿ೪ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಗ್ರಾಮದ ಪ್ರಮುಖರಾದ ಸದಾನಂದ ಪೂಜಾರಿ, ರಾಮ ಪೂಜಾರಿ, ನವೀನ್ ಚಂದ್ರ ಸುವರ್ಣ, ದಿನೇಶ್ ಕೋಟ್ಯಾನ್ ಮತ್ತಿತರ ಸಂಘಟನಾ ಪ್ರಮುಖರು ಇದ್ದರು.