HomeFresh Newsಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ : ಆರೋಪಿಗಳ ಬಂಧನ

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ : ಆರೋಪಿಗಳ ಬಂಧನ

ಕಾರ್ಕಳ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಅವರ ಮನೆ ಕಳ್ಳತನದ ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬಂಟ್ವಾಳ ಅರಂಬೋಡಿ ನಿವಾಸಿ ಪ್ರಸಾದ್ @ಪಚ್ಚು (34) ಮತ್ತು ಆತನಗೆ ಸಹಕರಿಸಿದ ಕಲ್ಯಾ ನಿವಾಸಿ ಶಿಬಾ (39) ಎಂದು ಗುರುತಿಸಲಾಗಿದೆ.

ಡಿಸೆಂಬರ್ 3 ರಂದು ರಾತ್ರಿ 08-30 ರಿಂದ 10:00 ಗಂಟೆಯ ಮದ್ಯೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಕೊಠಡಿಯಲ್ಲಿದ್ದ ಗೋದ್ರೇಜ್‍ನ ಬೀಗ ಮುರಿದು ಒಳಗಿದ್ದ ರೂ 9,75,000/-ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್‍ರವರ ತಂಡವು ಡಿ.21 ರಂದು ಪ್ರಕರಣದ ಆರೋಪಿ ಪ್ರಸಾದ್ @ ಪಚ್ಚು ಮತ್ತು ಆತನಿಗೆ ಕಳ್ಳತನ ಮಾಡಲು ಮಾಹಿತಿ ನೀಡಿ ಸಹಕರಿಸಿದ ಇನ್ನೊರ್ವ ಆರೋಪಿತೆ ಶಿಬಾ ಎಂಬಾಕೆಯನ್ನು ಬಂಧಿಸಿ, ಇಬ್ಬರು ಆರೋಪಿಗಳಿಂದ ಕಳ್ಳತನವಾಗಿದ್ದ ರೂ 9,75,000/- ರೂ ,ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಲಾಗಿದೆ.

ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಅಕ್ಷಯ ಹಾಕೆ ಮಚ್ಚೀಂದ್ರ, ಐಪಿಎಸ್, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ,ರವರ ನಿರ್ದೇಶನದಂತೆ ಕಾರ್ಕಳ ಉಪವೀಬಾಗದ ಡಿ.ವೈ,ಎಸ್.ಪಿ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments