ಬಂಟ್ವಾಳ : ಕಣಜಗಳ ಹಿಂಡು ದಾಳಿ ; ಮಹಿಳೆ ಸಾವು

ಬಂಟ್ವಾಳ ತಾಲೂಕಿನಲ್ಲಿ ಕಡಜಗಳ ಹಿಂಡು ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೆÇಲೀಸರು ಸೋಮವಾರ ತಿಳಿಸಿದ್ದಾರೆ ದಿನಗೂಲಿ ನೌಕರರಾದ ಮೀನಾಕ್ಷಿ ಎಂಬುವವರು ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಒಣ ಕೊಂಬೆಗಳನ್ನು ಸಂಗ್ರಹಿಸುತ್ತಿದ್ದಾಗ ಕಣಜಗಳ ದಾಳಿಗೆ ಒಳಗಾಗಿದ್ದರು. ಆಕೆ ಸಂಗ್ರಹಿಸಿದ ಕೊಂಬೆಗಳಲ್ಲಿದ್ದ ಕಡಜಗಳ ಹಿಂಡು ಆಕೆಯ ಮೇಲೆ ದಾಳಿ ನಡೆಸಿವೆ. ಕೂಡಲೇ ಸಮೀಪದ ಮನೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.