ಕೂಳೂರು ಮೇಲ್ಸೇತುವೆ ತಳಭಾಗ, ಪಾರ್ಕಿಂಗ್ ಉದ್ಘಾಟನೆ ಕಾರ್ಯಕ್ರಮ

ಮಂಗಳೂರಿನ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ನೂತನವಾಗಿ ನಿರ್ಮಿಸಿದ ಇಂಟರ್ಲಾಕ್ ಸುಸಜ್ಜಿತ ಪಾರ್ಕಿಂಗ್ ಜಾಗದ ಮೊದಲನೆಯ ಹಂತದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.
ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಸ್ವಾಮೀಜಿ , ಕುಳೂರು ಚರ್ಚ್‍ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಡಿಸೋಜಾ ಮತ್ತು ಕುಳೂರು ಮೊೈದೀನ್ ಜುಮ್ಮ ಮಸೀದಿಯ ಧರ್ಮಗುರುಗಳಾದ ಅಕ್ರಮುಲ್ಲ ಸಖಾಫಿ ಅವರು ಕಾರ್ಯಕ್ರಮವನ್ನಾ ಉದ್ಘಾಟಿಸಿದರು.

ಕುಳೂರು ಚರ್ಚ್‍ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಡಿಸೋಜಾ ಅವರು ಮಾತನಾಡಿ ಮನುಷ್ಯ ತನ್ನ ಜೀವಮಾನದಲ್ಲಿ ಈಶ, ದೇಶ, ಮಾನವ ಹಾಗೂ ಕಲಾ ಸೇವೆಯೆಂಬ ನಾಲ್ಕು ಅಂಶಗಳನ್ನು ಪಾಲಿಸಿದಾಗ ಅದು ದೇವರು ಮೆಚ್ಚುವ ಕೆಲಸವಾಗುತ್ತದೆ. ನಾಗರಿಕ ಹಿತರಕ್ಷಣಾ ಸಮಿತಿ ಈ ಉತ್ತಮ ಸೇವೆಯನ್ನು ಮಾಡಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ನಂತರ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಸ್ವಾಮೀಜಿ ಅವರು ಮಾತನಾಡಿ ಸ್ವಚ್ಛಪರಿಕಲ್ಪನೆ ಪ್ರತೀ ಮನ, ಮನೆಗಳ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿಯೂ ಇಂತಹ ಹೊಣೆಗಾರಿಕೆ ಬರಬೇಕಿದೆ ಎಂದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ| ಭರತ್ ಶೆಟ್ಟಿ ಅವರು ಮಾತನಾÀಡಿ ನಾಗರಿಕ ಹಿತರಕ್ಷಣಾ ಸಮಿತಿ ಅವರ ಉತ್ತಮ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಪಾರ್ಕಿಂಗ್ ವ್ಯವಸ್ಥೆಯ ಕಾಮಗಾರಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ, ಬೈಲು ಮೂಡುಕೆರೆ ಮನೆ ಶೆಡ್ಡೆ ಮಂಜುನಾಥ ಭಂಡಾರಿ, ಮನಪಾ ಸದಸ್ಯ ಅನಿಲ್ ಕುಮಾರ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಜಗನ್ನಾಥ್ ಗಾಂಭೀರ್, ಮಾಜಿ ಮನಪಾ ಸದಸ್ಯೆ ಶಾಂತಾ ರವೀಂದ್ರ, ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಡಾ| ರಾಜ್ ಮೋಹನ್ ರಾವ್, ಮೋಹನ್ ಕೋಟ್ಯಾನ್, ಉಮಾನಾಥ್ ಕೋಟೆಕಾರ್, ನಾಗರಿಕಾ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಡಾ| ಎಂ.ಎಸ್ ಪುತ್ರನ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೋಶಾಧಿಕಾರಿ ಕ್ಲೆವರ್ ಡಿಸೋಜಾ, ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.