ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಪಾರದರ್ಶಕತೆಯ ಕೊರತೆ: 7 ವರ್ಷಗಳ ಸೇವೆಯನ್ನು ಕಡೆಗಣಿಸಿದ ಮೇಲಾಧಿಕಾರಿಗಳು

ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ದಿನೇ ದಿನೇ ಕಗ್ಗಂಟಾಗಿ ಪರಿವರ್ತನೆಯಾಗುತ್ತಿದ್ದು, ಪೊಲೀಸ್ ಇಲಾಖೆಯ ಕೆಳಮಟ್ಟದ ಪೊಲೀಸ್ ಕಾನ್ಸ್ ಸ್ಟೇಬಲ್‌ಗಳ ಅಂತರ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವರ ಒಪ್ಪಿಗೆಯಿದ್ದರೂ ಇಲಾಖಾ ಮೇಲಾಧಿಕಾರಿಗಳು ಸಮ್ಮತಿ ಸೂಚಿಸದೇ ಪದೇ ಪದೇ ವಿಳಂಭ ನೀತಿ ಅನುಸರಿಸುತ್ತಿರುವುದು ಪೊಲೀಸರ ಗೋಳು ಕೇಳೋರ್‍ಯಾರು ಎಂಬಂತಹ ಪರಿಸ್ಥಿತಿಗೆ ಬಂದು ತಲುಪಿದೆ.

ಪೊಲೀಸ್ ಇಲಾಖೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿಲ್ಲವೆನ್ನುವುದನ್ನೇ ಗುರಿಯಾಗಿಸಿಕೊಂಡು ಪೂರ್ವಗ್ರಹಪೀಡಿತರಾಗಿ ಕಳೆದ ಒಂದೂವರೆ ವರ್ಷದ ಹಿಂದಿನಿಂದಲೂ ನಡೆಯುತ್ತಿರುವ ಪ್ರೋಸೆಸ್ ಇನ್ನು ಮುಗಿಯಲಿಲ್ಲವೇ ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

ಇಲಾಖೆಯಲ್ಲಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಾಗ 7 ವರ್ಷ ಸೇವೆ ಸಲ್ಲಿಸಿದವರಿಗೆಲ್ಲಾ ಪೋರ್ಟಲ್ ಶ್ರೇಯಾಂಕದ ಮೇಲೆ ವರ್ಗಾವಣೆ ನೀಡುವುದಾಗಿ ನೋಟಿಫಿಕೇಷನ್ ಹೊರಡಿಸಿದ್ದು, ಈಗ ಪೋರ್ಟಲ್ ಪ್ರಕಾರ ವರ್ಗಾವಣೆ ನೀಡದೆ ಸೇವಾಹಿರಿತನದ ಮೇಲೆ ಕೇವಲ 10 ವರ್ಷಕ್ಕಿಂತ ಹೆಚ್ಚಿಗೆ ಸೇವೆ ಸಲ್ಲಿಸಿದವರಿಗೆ ಮಾತ್ರ ವರ್ಗಾವಣೆ ನೀಡುವುದಾಗಿ ಡಿ.ಜಿ. ಕಚೇರಿಯಿಂದ ತಿಳಿಸಿದರುವು ಬಡ ಕಾನ್ಸ್‌ಸ್ಟೇಬಲ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪೊಲೀಸ್ ಇಲಾಖೆಯಲ್ಲಿರುವ ಕಾನ್ಸ್ ಸ್ಟೇಬಲ್‌ಗಳು ಬಹುತೇಕ ಬಡ ಕುಟುಂಬದಿಂದ ಬಂದಿದ್ದು, ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಅನೇಕ ಕುಟುಂಬಗಳಲ್ಲಿ ಪಾರ್ಶ್ವವಾಯು ಹೊಂದಿರುವ ಪೋಷಕರು ಅಂಗವಿಕಲರು, ರೋಗಿಗಳಿದ್ದು, ಅವರನ್ನು ನೋಡಿಕೊಳ್ಳಲು ಹರಸಹಾಸಪಡುತ್ತಿದ್ದಾರೆ. ಈಗಲಾದ್ರೂ ಗೃಹ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಪೋರ್ಟಲ್ ಪ್ರಕಾರ ವರ್ಗಾವಣೆ ಆದೇಶ ಮಾಡಿ ಸಿಬ್ಬಂದಿಗಳ ಕಷ್ಟಕ್ಕೆ ಸ್ಪಂದಿಸುವ ಅನಿವಾರ್ಯತೆ ಇದೆ.

govt women polytechnic

Related Posts

Leave a Reply

Your email address will not be published.