ಅಶೋಕ ಸೇವಾ ಭವನದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

ಜೀವನದಲ್ಲಿ ಉತ್ತಮವಾದ ಆರೋಗ್ಯ ಎನ್ನುವುದು ಸಂತೋಷದಾಯಕ ಜೀವನದ ಮೂಲವಾಗಿದ್ದು ಅದಕ್ಕಾಗಿ ಉತ್ತಮ ಆಹಾರದೊಂದಿಗೆ ಯೋಗ ಧ್ಯಾನ, ವ್ಯಾಯಾಮ ಇತ್ಯಾದಿ ಪ್ರಯತ್ನಗಳನ್ನು ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಂಡು ಸ್ಥಿರ ಮನಸ್ಸಿನೊಂದಿಗೆ ಶರೀರವನ್ನು ಚಲನಾತ್ಮಕವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಲಯನ್ಸ್ ಕ್ಲಬ್ ಆಶೋಕನಗರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ. ಹೇಳಿದರು.

ಅವರು ಲಯನ್ಸ್ ಕ್ಲಬ್ ಅಶೋಕನಗರ, ಲಯನ್ಸ್ ಕ್ಲಬ್ ಬೆಂದೂರ್‍ವೆಲ್, ಮಂಗಳೂರು ಹಾಗೂ ಕಂಪಾನಿಯೋ ಮಂಗಳೂರು ಜಂಟಿಯಾಗಿ ಆಯೋಜಿಸಿದ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ವಲಯಾಧ್ಯಕ್ಷೆ ಬಬಿತಾ ಲೋಕೇಶ್ ಮಾತನಾಡಿ, ಫೂಟ್ ಪಲ್ಸ್ ಥೆರಪಿ ಎನ್ನುವುದು ಶರೀರಕ್ಕೆ ಆಯಾಸ ನೀಡದೆ, ಹಲವಾರು ಕಾಯಿಲೆಗಳನ್ನು ಗುಣಪಡಿಸುವ ವಿಧಾನವಾಗಿದ್ದು, ಉಚಿತವಾಗಿ ಒದಗಿಸುವ ಈ ಸೇವೆಯನ್ನು ಸದುಪಯೋಗ ಪಡೆಸಿಕೊಳ್ಳುವಂತೆ ತಿಳಿಸಿದರು.

ಕಂಪಾನಿಯೋ ಮಂಗಳೂರು ಇದರ ಪ್ರತಿನಿಧಿ ಶ್ರೀಧರ್ ಪೂಜಾರಿಯವರು ಸೆ.16ರಿಂದ 30ರ ವರೆಗೆ ಕದ್ರಿ ಅಶೋಕ್ ಲಯನ್ಸ್ ಸೇವಾ ಭವನದಲ್ಲಿ ನಡೆಯಲಿರುವ ಈ ಉಚಿತ ಫೂಟ್ ಪಲ್ಸ್ ಥೆರಪಿ ಎನ್ನುವುದು ಮದುಮೇಹ, ಅಧಿಕ ರಕ್ತದೊತ್ತಡ, ಸಂದಿವಾತ, ಊತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಪಾರ್ಕಿಸನ್, ಸಯಾಟಿಕಾ, ಸರ್ವಿಕಲ್ ಸ್ಟಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಡ್, ಪಾಶ್ರ್ವವಾಯು, ಬೆನ್ನು ನೋವು, ಬೊಜ್ಜು ನಿವಾರಣೆ, ಕಾಲಿನ ಗಂಟು ನೋವು ಇತ್ಯಾದಿಗಳನ್ನು ದಿನದಲ್ಲಿ 30 ನಿಮಿಷದ ಚಿಕಿತ್ಸೆಯಂತೆ ಹದಿನೈದು ದಿನಗಳವರೆಗೆ ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ನಡೆಯಲಿದ್ದು, ಸಾರ್ವಜನಿಕರಯ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು. ಲಯನ್ಸ್ ಕ್ಲಬ್, ಅಶೋಕನಗರ ಅಧ್ಯಕ್ಷೆ ಕುಸುಮಾ ಯು.ಆರ್, ಕಾರ್ಯದರ್ಶಿ ಪ್ರತಿಮಾ ಉದಯ ರೈ, ಖಜಾಂಚಿ ಪ್ರಜ್ವಲ್ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಶ್ರೀನಾಥ್ ರಾವ್, ಉಪಾಧ್ಯಕ್ಷ ಡಾ. ಭರತ್ ರಾಜ್, ಅಶೋಕನಗರ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ, ವಸಂತ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಉಪಸ್ಥಿತರಿದ್ದರು. ಮಂಜು ಪ್ರಾರ್ಥಿಸಿದರು. ಕುಸುಮ ಯು.ಆರ್. ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.

Related Posts

Leave a Reply

Your email address will not be published.