ಉಳ್ಳಾಲ : ಬೈಕ್‍ನ ಹಿಂಬದಿಗೆ ಮೀನಿನ ಲಾರಿ ಢಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಉಳ್ಳಾಲ: ಮೀನಿನ ಲಾರಿ ಬೈಕ್‍ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಾಸರಗೋಡು ನಿವಾಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಕುಂಬಳೆ ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ, ಕುಂಪಲ ಬೈಪಾಸ್ ರಾ.ಹೆ.ಯಲ್ಲಿ ಇಡಲಾದ ಬ್ಯಾರಿಕೇಡ್ ತಪ್ಪಿಸುವ ವೇಳೆ ಹಿಂಬದಿಯಿಂದ ಮಲ್ಪೆಯಿಂದ ಕಾಸರಗೋಡಿನತ್ತ ತೆರಳುತ್ತಿದ್ದ ಮೀನಿನ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳದಲ್ಲಿದ್ದಾರೆ.