ಲಯನ್ಸ್ ಕ್ಲಬ್ ಪಂಪ್ ವೆಲ್ : ಆರೋಗ್ಯಮಾಹಿತಿ ಕಾರ್ಯಗಾರ ಯು.ಟಿ.ಖಾದರ್ ರಿಂದ ಚಾಲನೆ
ಲಯನ್ಸ್ ಕ್ಲಬ್ ಮಂಗಳೂರು ಪಂಪ್ ವೆಲ್ ಕಲ್ಪವೃಕ್ಷ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಸಪ್ತಾಹ 8-8-2022ರಿಂದ 15.8.22ರ ವರೆಗೆ ಆರೋಗ್ಯಮಾಹಿತಿ ಕಾರ್ಯಗಾರ, ಆರ್ಥಿಕ ,ವೈದ್ಯಕೀಯ, ಶೈಕ್ಷಣಿಕ ನೆರವು, ಹಾಗೂ ಶಾಲಾ ವಠಾರ ನೈರ್ಮಲೀಕರಣ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ದ.ಕ.ಜಿಲ್ಲಾ ಪಂ. ಇರಿಯ ಪ್ರಾಥಮಿಕ ಶಾಲೆ ಬಗಂಬಿಲದಲ್ಲಿ ನಡೆಯಿತು. ಶಾಲಾ ವಠಾರ ನೈರ್ಮಲೀಕರಣ ಕಾರ್ಯಕ್ರಮಕ್ಕೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ವಿಶ್ವಾಸ ಭರಿತ ಸಮಾಜ ಅಭಿವೃದ್ಧಿಯ ಕರ್ನಾಟಕಕ್ಕೆ ಈ ನೈರ್ಮಲೀಕರಣ ಕಾರ್ಯಕ್ರಮ ಅತ್ಯತ್ತಮ ಪ್ರಾಮುಖ್ಯತೆ ಹೊಂದಿದೆ, ಲಯನ್ಸ್ ಕಲ್ಲಬ್ ಅವರ ನೈರ್ಮಲೀಕರಣ ನಿಮಗೂ ಪ್ರೇರಣೆ, ಮುಂದಿನ ದಿನಗಳಲ್ಲಿ ಇದನ್ನು ಶಾಲೆಯಲ್ಲಿ ಮುಂದುವರೆಸಿ ಎಂದರು. ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ್. ಐ.ಬಗಂಬಿಲ, ಹಿರಿಯ ಆರೋಗ್ಯ ಅಧಿಕಾರಿ ವಿಕ್ರಂ ಶಾಲಾ ಅಭಿವೃದ್ಧಿ ಸಮಿತಿ ಅಧಯಕ್ಷರಾದ ಯೋಗೀಶ್ ಆಚಾರ್ಯ, , ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಸದಾಶಿವ ಉಳ್ಳಾಲ್, ನವೀನ್ ಬಗಂಬಿಲ, ಪಿಲಾರ್ ಕ್ಲಸ್ಟರ್ ಸಿ.ಆರ್.ಪಿ , ಗೀತಾ ಡಿ. ಶೆಟ್ಟಿ, ಲಯನ್ಸ್ ಕಾರ್ಯಕಾರಿಸಮಿತಿ ಸದಸ್ಯರಾದ ಸಂದೀಪ್ ಮಹಾಲೆ, ಉಮೇಶ್ ಅತಿಕಾರಿ, ಲಯನ್ಸ್ ಕ್ಲಬ್ ಮಂಗಳೂರು ಪಂಪ್ ವೆಲ್ ಕಲ್ಪವೃಕ್ಷ ಕಾರ್ಯದರ್ಶಿ ರೋಹಿತ್ ಮಾಸ್ಟರ್ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ವಸಂತ್ ರೈ ಸ್ವಾಗತಿಸಿದರು, ಶಾಲಾ ಶಿಕ್ಷಕಿ ಪ್ರತಿಮಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು, ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.