ಮೂಲಭೂತ ಸೌಕರ್ಯ ವಂಚಿತ ಮಲೆಕುಡಿಯ ಆದಿವಾಸಿಗಳು : ನಾವೂರ್ ಮತ್ತು ಕುತ್ಲೂರಿಗೆ ಯುವ ರೈತ ಘಟಕ ತಂಡ ಭೇಟಿ

ಕುದುರೆಮುಖ ರಾಷ್ಟ್ರೀಯ ಅರಣ್ಯ ಮೀಸಲು ಪ್ರದೇಶದಲ್ಲಿನ ಮಲೆಕುಡಿಯ ಆದಿವಾಸಿಗಳು 100 ವರ್ಷಕ್ಕೂ ಹೆಚ್ಚು, ಈ ಕಾಡಿನಲ್ಲಿ ಪ್ರಸ್ತುತ ಜೀವನ ಪರಿಸ್ಥಿತಿಯನ್ನು ತಿಳಿಯಲು ಅನ್ವೇಷಣೆಗಾಗಿ ಬೆಳ್ತಂಗಡಿ ತಾಲೂಕಿನ ಮಲೆಕುಡಿಯ ಬುಡಕಟ್ಟು ಗ್ರಾಮ ನಾವೂರ್ ಮತ್ತು ಕುತ್ಲೂರಿಗೆ ಯುವ ರೈತ ಘಟಕ ತಂಡ ಭೇಟಿ ನೀಡಿತ್ತು. ಮಲಿಕುಡಿಯ ಆದಿವಾಸಿಗಳು ಈ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ಅವರ ಮೂಲಭೂತ ಹಕ್ಕುಗಳಾದ ವಿದ್ಯುತ್, ನೀರಾವರಿ ಮತ್ತು ರಸ್ತೆ ಸಂಪರ್ಕದಿಂದ ವಂಚಿತವಾಗಿದೆ ಎಂದು ಗ್ರಾಮಸ್ತರು ದೂರಿದರು.

ಜಿಲ್ಲಾಡಳಿತ ಮತ್ತು ಸರ್ಕಾರ ಆದಿವಾಸಿಗಳ ಮೂಲಭೂತ ಹಕ್ಕುಗಳನ್ನು ವಂಚಿಸುತ್ತಿದ್ದಾರೆ . ಈಗಿನ ಆಡಳಿತ ಪಕ್ಷ ಆದಿವಾಸಿಗಳನ್ನು ಕಳೆದ ಚುನಾವಣೆಯ ಸಮಯದಲ್ಲಿ ಸಂಪರ್ಕಿಸಿ ಆಳಿಯ ಗ್ರಾಮದಲ್ಲಿ ಮೀಟರ್ ಬಾಕ್ಸ್ ಅಳವಡಿಸಿ, ತಾವು ಅಧಿಕಾರಕ್ಕೆ ಬಂದರೆ ವಿದ್ಯುತ್, ರಸ್ತೆ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿ 5 ವರ್ಷಗಳೇ ಕಳೆದಿವೆ, ಆದರೆ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ರೈತ ಸಂಘದ ಯುವ ಘಟಕ ತಂಡದ ನೆರವು ಕೋರಿದ್ದಾರೆ.

ಈ ಭೇಟಿ ಮಾಡಿದ ರೈತ ಸಂಘ ತಂಡದಲ್ಲಿ ರಾಜ್ಯ ಸಂಚಾಲಕ ಹಾಗೂ ಜಿಲ್ಲಾಧ್ಯಕ್ಷ ಆದಿತ್ಯ ಕೊಲ್ಲಾಜೆ, ಸುರೇಂದ್ರ ಕೋರ್ಯ, ಶಿವಾನಂದ ಬಿ.ಸಿ.ರೋಡ್, ಅವಿನಾಶ್, ದೇವಪ್ಪ, ಉಮೇಶ ಹಾಗೂ ಕಾರ್ಮಿಕ ಸಂಘದ ಮುಖಂಡ ರಾಮಣ್ಣ ವಿಟ್ಲ ಇದ್ದರು.

Related Posts

Leave a Reply

Your email address will not be published.