ಕಾಂಗ್ರೆಸ್ ಹೇಳಿಕೆಗೆ ಶಾಸಕ ಹರೀಶ್ ಪೂಂಜಾ ತಿರುಗೇಟು

ಚುನಾವಣೆ ಬಂದಾಗ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುತ್ತಾರೆ ಎಂದು ಹೇಳಿದ ಕಾಂಗ್ರೆಸ್ ನಾಯಕರಿಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.ಕಳೆದ ನಾಲ್ಕೂವರೆ ವರ್ಷದ ಹಿಂದೆ ಇಲ್ಲಿನ ನಾಯಕರೊಬ್ಬರು ತಾಲೂಕಿನ ಹಲವಾರು ಕಡೆ ತೆಂಗಿನ ಕಾಯಿ ಒಡೆದು ಜನರನ್ನು ಮರುಳು ಮಾಡಿದ ಹಾಗೆ ನಾವು ಮಾಡಲಿಲ್ಲ. ಇಡೀ ತಾಲೂಕಿನಲ್ಲಿ ಅಭಿವೃದ್ದಿ ಮಾಡುವ ಮೂಲಕ ನಮ್ಮ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೇವೆಯೋ ಅದನ್ನು ಚಾಚೂ ತಪ್ಪದೇ ಮಾಡಿದ್ದೇವೆ ಎಂದು ತಿರುಗೇಟು ಕೊಟ್ಟಿದ್ದಾರೆ
