ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ವಿರುದ್ಧ ಪೂರ್ವ ದ್ವೇಷದ ದೂರು : ಆರೋಪ

ಮಹಿಳಾ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಶ್ರೀಲತಾ ಅವರ ವಿರುದ್ಧ ಫಾಸಿಮ್‌ ನೌಶಿಫ್‌ ಎಂಬವರು ಪೊಲೀಸ್‌ ಕಮಿಷನರ್‌ ಅವರಿಗೆ ಪೂರ್ವದ್ವೇಷದಲ್ಲಿ ಸುಳ್ಳು ದೂರು ನೀಡಿದ್ದಾರೆ.

2020 ನೇ ಸಾಲಿನಲ್ಲಿ ಮಹಿಳಾ ಠಾಣೆಯಲ್ಲಿ ನಪಿಸತ್ ಅಸ್ಮಾರ ನೀಡಿದ ದೂರಿನ ಆಧಾರದಲ್ಲಿ ವರದಕ್ಷಿಣ ಕಿರುಕುಳ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಮುನ್ನ ಫಾಸಿಮ್‌ ನೌಶಿಫ್‌ ಮೇಲೆ (2020ರಲ್ಲಿಯೇ ) ಎಂಡಿಎಂ ಮಾದಕ ದ್ರವ್ಯ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ನಾರ್ಕೊಟಿಕ್‌ ವಿಭಾಗದದಲ್ಲಿ ಶ್ರೀಲತಾ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಆರೋಪಿ ನೌಶಿಮ್‌ ನನ್ನು ಶ್ರೀಲತಾ ಅವರೇ ಬಂಧಿಸಿದ್ದರು. ಇದೇ ಪೂರ್ವದ್ವೇಷದಲ್ಲಿ ಶ್ರೀಲತಾ ವಿರುದ್ಧ ಭ್ರಷ್ಟಾಚಾರದ ಸುಳ್ಳು ದೂರು ನೀಡಿದ್ದಾರೆ.

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮಹಿಳಾ ಠಾಣೆಯ ಪೊಲೀಸ್ ಶ್ರೀಲತಾ ಅವರು ತನಿಖಾ ಸಹಾಯಕಿಯಾಗಿ ಕೆಲಸ ಮಾಡಿ ನೊಂದ ಮಹಿಳೆ ನಪಿಸತ್ ಅಸ್ಪರಾ ಅವರಿಗೆ ಕಾನೂನು ಪ್ರಕಾರ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ನೆರವಾಗಿದ್ದರು.
ನಫಿಸಾ ಅವರಿಗೆ ಮದುವೆ ಸಂದರ್ಭ ತವರು ಮನೆಯವರು ನೀಡಿದ ಚಿನ್ನಾಭರಣಗಳನ್ನು ಆರೋಪಿತರಾದ ಫಾಸಿಮ್ ನೌಶಿಪ್ ಮತ್ತು ಅವರ ತಂದೆ ನಜೀಬ್, ತಾಯಿ ಪಾಸಿಲ ಅವರ ಹೆಸರಿನಲ್ಲಿ ಐಡಿಬಿಐ ಬ್ಯಾಂಕಿನ ಲಾಕರ್ ನಲ್ಲಿ ಇರಿಸಿದ್ದರು. ತನಿಖೆಯ ವೇಳೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಲಾಕರ್ ತೆರೆದು ಚಿನ್ನಾಭರಣಗಳನ್ನು ಸಂತ್ರಸ್ತ ಮಹಿಳೆ ಆಸ್ಮಾರ ಅವರಿಗೆ ಅವರಿಗೆ ದೊರಕುವಂತೆ ಮಾಡಿದ್ದರು.
ಹಾಗೂ ಪ್ರಕರಣದಲ್ಲಿ ಶ್ರೀಲತಾ ಅವರು ಸಂಪೂರ್ಣ ತನಿಖೆಗೆ ಸಹಕರಿಸಿದ್ದು, ಅಂತಿಮ ವರದಿ ಸಲ್ಲಿಕೆಯಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

2023ರ ಫೆ.21ರಂದು ವಿಚಾರಣೆಗೆಂದು ನಫಿಸತ್‌ ಆಸ್ಪಾರ ಮತ್ತು ಅವರ ತಾಯಿ ಹಾಗೂ ಸಂಬಂಧಿಕರು ಮತ್ತು ನಾವು ನ್ಯಾಯಾಲಯಕ್ಕೆ ಬಂದಿದ್ದೆವು. ಹಿಂದಿರುಗುವ ವೇಳೆ ಆರೋಪಿ ಫಾಸಿಂ ನೌಶಿಫ್‌ ಅವರ ತಂದೆ ನಜೀಮ್‌, ತಾಯಿ ಫಾಸಿಲಾ ಅವರುಗಳು ನಫೀಸತ್ ಆಸ್ಪಾರ ಮತ್ತು ಅವರ ತಾಯಿ ಮತ್ತು ನಾವು ಇದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಎಂಪೈರ್ ಮಾಲ್ ಎದುರುಗಡೆ ಅಡ್ಡ ಹಾಕಿ ಗಲಾಟೆ ಮಾಡಿದ್ದರು. ಈ ಸಂದರ್ಭ ನೆರವಿಗಾಗಿ ಪ್ರಕರಣದ ತನಿಖೆ ನಡೆಸಿ ಪರಿಚಿತರಾದ ಪೊಲೀಸ್‌ ಶ್ರೀಲತಾ ಅವರಿಗೆ ದೂರವಾಣಿ ಕರೆ ಮಾಡಿದೆವು. ಅವರು 112 ವಾಹನದಲ್ಲಿ ಮಂಗಳೂರು ನಗರದ ಕ್ಲಾಕ್ ಟವರ್ ನಲ್ಲಿ ಕರ್ತವ್ಯದಲ್ಲಿ ಇರುವುದಾಗಿ ತಿಳಿಸಿದರು. ಆಗ ಅವರು ಕೆಲಸ ಮಾಡುತ್ತಿದ್ದಲ್ಲಿಗೆ ಹೋಗಿದ್ದು, ಯಾರು ಹೊರಗಡೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣಕ ನಮ್ಮ ವಿನಂತಿಯ ಮೇರೆಗೆ ಅವರು ನಾವು ಕುಳಿತಲ್ಲಿಗೆ ಬಂದು ನಮ್ಮ ಅಹವಾಲು ವಿಚಾರಿಸಿದ್ದರು. ವಿಚಾರ ತಿಳಿದ ಬಳಿಕ ಘಟನೆ ನಡೆದ ಸ್ಥಳ ಬರ್ಕೆ ವ್ಯಾಪ್ತಿಗೆ ಸೇರುವುದರಿಂದ ಬರ್ಕೆ ಠಾಣೆಗೆ ತೆರಳಿ ದೂರು ನೀಡುವಂತೆ ಶ್ರೀಲತಾ ಅವರು ತಿಳಿಸಿದ್ದರು.

ಮಧ್ಯಾಹ್ನದಿಂದ ನಮ್ಮನ್ನು ಹಿಂಬಾಲಿಸುತ್ತಿದ್ದ ನೌಶಿಪ್ ಆತನ ತಂದೆ ನಜೀಮ್‌ ತಾಯಿ ಫಾಸಿಲ ಅವರುಗಳು ಅವರ ವಾಹನದಿಂದ ಇಳಿದು ಸಮವಸ್ತ್ರದಲ್ಲಿದ್ದ ಕರ್ತವ್ಯ ನಿರತ ಶ್ರೀಲತಾ ಅವರೊಂದಿಗೆ ಗಲಾಟೆ ಮಾಡಿ ಬೈದು ಹೋಗಿದ್ದರು.ನಾವು ಬರ್ಕೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಮ್ಮ ಮತ್ತು ಶ್ರೀಮತಿ ಶ್ರೀಲತಾ ಅವರ ಮಧ್ಯೆ ಯಾವುದೇ ಹಣದ ವ್ಯವಹಾರ ನಡೆದಿರುವುದಿಲ್ಲ,ಫಾಸಿಂ ನೌಶಿಫ್‌ ಅವರ ತಂದೆ, ತಾಯಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಜತೆ ಗಲಾಟೆ ಮಾಡುವುದು ಹೊಸತೇನಲ್ಲ ಈ ಮೊದಲು ಇದೇ ಪ್ರಕರಣದಲ್ಲಿ ಇಂದಿನ ಮಹಿಳಾ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ರೇವತಿ ಹಾಗೂ ಶೀಲತಾ ಅವರು ಮನೆಗೆ ನೋಟಿಸ್ ನೀಡಲು ಹೋದಾಗಲೂ ಪೊಲೀಸರೊಂದಿಗೆ ಗಲಾಟೆ ಮಾಡಿದ್ದರು.


ಅಲ್ಲದೆ ಪೊಲೀಸರು ಬ್ಯಾಂಕಿನ ಲಾಕರ್‌ನಲ್ಲಿ ಇರಿಸಲಾಗಿದ್ದು ಚಿನ್ನಾಭರಣ ಮುಟ್ಟುಗೋಲು ಹಾಕಿಕೊಳ್ಳಲು ಹೋದಾಗಲೂ ಪೊಲೀಸರೊಂದಿಗೆ ಗಲಾಟೆ ಮಾಡಿದ್ದರು. ಬ್ಯಾಂಕ್‌ ಸಿಬ್ಬಂದಿಗಳೊಂದಿಗೂ ಅವರು ಗಲಾಟೆ ಮಾಡಿದ್ದು ಆ ವಿಚಾರವಾಗಿ ಅವರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಹಾಜರುಪಡಿಸಲಾಗಿತ್ತು.ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ, ಸಂತ್ರಸ್ತ ಮಹಿಳೆಯ ಪರವಾಗಿ ನಿಂತ ಮಾಡಿದ ಪೊಲೀಸ್ ಹೆಡ್‌ಕಾನ್ ಸ್ಟೇಬಲ್‌ ಶ್ರೀಲತಾ ವಿರುದ್ಧವೇ ಆರೋಪಿಗಳು ದೂರು ನೀಡಿದ್ದು, ಪರಿಣಾಮ ಶ್ರೀಲತಾ ಅಮಾನತಾಗಿದ್ದಾರೆ. ಈ ಹಿಂದೆ ಪ್ರಕರಣದ ಕುರಿತು ಹಿಂದಿನ ಪೊಲೀಸ್‌ ಕಮಿಷನರ್‌ ಎನ್.‌ ಶಶಿಕುಮಾರ್‌ ಅವರು ತನಿಖಾ ಸಹಾಯಕಿ ಅವರನ್ನು ಕರೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದರು. ಹೊಸದಾಗಿ ಬಂದ ಪೊಲೀಸ್‌ ಕಮಿಷನರ್‌ ಅವರಿಗೆ ಪ್ರಕರಣ ನೈಜ ಮಾಹಿತಿ ನೀಡುವ ಅವಕಾಶ ಸಿಕ್ಕಿಲ್ಲ.ಎಂದು ಸುದ್ದಿಗೋಷ್ಠಿಯಲ್ಲಿಸುಹೇಲ್‌ (ನಫೀಸತ್ ಆಸ್ಪರ ಅವರ ಸಹೋದರ ಮಾವ)ರಶೀದ್‌ (ನಫೀಸಾ ಅಸ್ಪರ ಸಂಬಂಧಿ)ತಿಳಿಸಿದರು.

Related Posts

Leave a Reply

Your email address will not be published.