ಮಂಗಳೂರು: ಕುಂಟಿಕಾನದಲ್ಲಿ ‘ಕಲರವ’ ಮಕ್ಕಳ ಅಭಿವೃದ್ಧಿ ಕೇಂದ್ರದ ಉದ್ಘಾಟನೆ

ಮಂಗಳೂರಿನ ಕುಂಟಿಕಾನದ ಎಜೆ ಅಸ್ಪತ್ರೆಯ ಸಮೀಪದಲ್ಲಿ ಕದ್ರಿಯ ಫೈರ್ ಸ್ಟೇಷನ್ ಹಿಂಭಾಗದಲ್ಲಿ ’ಕಲರವ’ ಮಕ್ಕಳ ಅಭಿವೃದ್ಧಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಡಾ. ಶಿಲ್ಪ ಹೆಗ್ಡೆ ಮಾಲಕತ್ವದಲ್ಲಿ ಕಲರವ ಸೆಂಟರ್ ಫಾರ್ ಚೈಲ್ಡ್ ಡೆವಲಪ್‌ಮೆಂಟ್ ನಗರದ ಕುಂಟಿಕಾನ ಸಮೀಪದಲ್ಲಿ ಕಾರ್ಯಾರಂಭಗೊಂಡಿದೆ. ಕಲರವ ನೂತನ ಕೇಂದ್ರವನ್ನು ಜಯಶ್ರೀ ಹೆಗ್ಡೆ ಮತ್ತು ಗಜಾನನ ಹೆಗ್ಡೆ ಅವರು ರಿಬ್ಬನ್ ಕತ್ತರಿಸಿ ಉದ್ಘಟಿಸಿದರು.

ನಂತರ ತರಗತಿ ಕೊಠಡಿಗಳನ್ನು ಸಂಸದ ಬ್ರಿಜೇಶ್ ಚೌಟ ಮತ್ತು ಶಿಶುವೈದ್ಯರಾದ ಡಾ. ಸಮೀರ್ ಎಚ್. ದಳವಾಯಿ ಅವರು ಉದ್ಘಾಟಿಸಿದರು.

ಇದೇ ವೇಳೆ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಸದ ಬ್ರಿಜೇಟ್ ಚೌಟ ಅವರು ಮಾತನಾಡಿ, ಭಾರತೀಯ ಮಾದರಿ ವಿಶ್ವಕ್ಕೆ ಶಾಂತಿ, ಸಹಬಾಳ್ವೆಯನ್ನು ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಶ್ರೀಹರ್ಷ ಮತ್ತು ಶಿಲ್ಪಾ ಹೆಗ್ಡೆ ಅವರ ಈ ವಿಶೇಷ ಪ್ರಯತ್ನಕ್ಕೆ ಶುಭವಾಗಲಿ.. ಎಂದರು.

ಶಿಶುವೈದ್ಯರಾದ ಡಾ. ಸಮೀರ್ ಎಚ್. ದಳವಾಯಿ ಅವರು ಮಾತನಾಡಿ, ಮಕ್ಕಳಿಗಾಗಿ ಇಂತಹ ಅಭಿವೃದ್ಧಿ ಕೇಂದ್ರಗಳ ಅಗತ್ಯತೆ ಇದೆ ಎಂದ ಅವರು ’ಕಲರವ’ ಮಕ್ಕಳ ಅಭಿವೃದ್ಧಿ ಕೇಂದ್ರಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ಪಿಡಿಯಾಟ್ರಿಕ್ಸ್ ವಿಭಾಗದ ಮಾಜಿ ಹೆಚ್‌ಒಡಿ ಡಾ. ಶಾಂತರಾಮ್ ಬಾಳಿಗ, ಎಜೆ ಆಸ್ಪತ್ರೆಯ ಪಿಡಿಯಾಟ್ರಿಕ್ಸ್ ವಿಭಾಗದ ಪ್ರೊ. ಹೆಚ್‌ಒಡಿ ಡಾ. ಸಂತೋಷ್ ಸೋನ್ಸ್, ಗೀತಾ ತುಳಪುಲೆ, ಡಾ. ಎನ್ ಎಮ್ ತುಳಪುಲೆ, ಮತ್ತಿತರರು ಉಪಸ್ಥಿತರಿದ್ದರು.

ಕಲವರ ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಓಕ್ಯೂಪೇಷನಲ್ ಥೆರಪಿ, ಸ್ಪೀಚ್ ತೆರಪಿ, ಚೈಲ್ಡ್ ಕೌನ್ಸಲಿಂಗ್, ಫಿಸಿಯೋಥೆರಪಿ, ನೀಡಲಾಗುತ್ತಿದ್ದು, ನುರಿತ ಸಿಬ್ಬಂದಿ ವರ್ಗದವರಿದ್ದಾರೆ. ಕಲವರ ನೂತನ ಮಕ್ಕಳ ಅಭಿವೃದ್ಧಿ ಕೇಂದ್ವು ಅತ್ಯಾಧುನಿಕ ಮತ್ತು ಸುಸ್ಸಜ್ಜಿತ ರೀತಿಯಲ್ಲಿ ನಿರ್ಮಾಣಗೊಂಡಿದೆ.

Related Posts

Leave a Reply

Your email address will not be published.