ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ನೆರವು, ಜೊತೆಗೆ ಯೋಗಕ್ಷೇಮ ವಿಚಾರಿಸಿದ ಲಂಚುಲಾಲ್ ಕೆ.ಎಸ್

ನಮ್ಮ ಸಮಾಜದಲ್ಲಿ ಮಾನವೀಯತೆಯೇ ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಇರುವವರೇ ಕಡಿಮೆ. ಅಂತದ್ರಲ್ಲಿ.. ಇಲ್ಲೊಬ್ಬರು ಸಾಮಾಜಿಕವಾಗಿ ಆರ್ಥಿಕವಾಗಿ ನೊಂದ ಕುಟುಂಬಗಳಿಗೆ ಸ್ಪಂದಿಸುವವರು ನಮ್ಮ ಜೊತೆ ಇದ್ದಾರೆ.. ಅವರೇ ಅಸ್ತ್ರ ಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್. ಅವರು..
ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕೇವಲ ಚಿಕಿತ್ಸೆ ವೆಚ್ಚ ಮಾತ್ರವಲ್ಲದೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇದು ಅವರ ಜನಸಾಮಾನ್ಯರ ಮೇಲೆ ಇಟ್ಟಿರುವ ವಿಶೇಷ ಕಾಳಜಿ. ಇಂತಹ ಸಮಾಜಮುಖಿ ಕಾರ್ಯದಲ್ಲಿ ಮತ್ತು ನೊಂದವರ ಬಾಳಿಗೆ ಬೆಳಕಾಗುವ ಲಂಚುಲಾಲ್ ಅವರು ಇನ್ನಷ್ಟು ನಮ್ಮ ಸಮಾಜಕ್ಕೆ ಕೊಡುಗೆಗಳನ್ನು ನೀಡಲಿ. ಮತ್ತು ನೊಂದವರ ಬಾಳಿಗೆ ಬೆಳಕಾಗಲಿ.