ಮಂಗಳೂರು: ಎಂಆರ್‌ಪಿಎಲ್ ಸಿಎಸ್‌ಆರ್ ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಯ ನೂತನ ಸೌಲಭ್ಯ ಉದ್ಘಾಟನೆ

ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ  ಸ್ನೇಹಾಲಯ ಸಂಸ್ಥೆಯು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು. 

ಈ ಸೌಲಭ್ಯವನ್ನು ಮಂಗಳೂರಿನ  ಎಂಆರ್‌ಪಿಎಲ್ ಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ ಸಬಲೀಕರಣಗೊಳ್ಳುವ ಅಭಿವ್ಯಕ್ತಿಶೀಲ ಕಲಾ ಚಿಕಿತ್ಸೆ ಮತ್ತು ವಿವಿಧ ಗುಣಪಡಿಸುವ ಶಾರಿರಿಕ್ ಹಾಗು ಮನಾಸಿಕ ಚಟುವಟಿಕೆಗಳಿಗೆ ಮೀಸಲಿಡಲಾಗುವುದು.

ಹಲವಾರು ಗಣ್ಯ ಅತಿಥಿಗಳ ಉಪಸ್ಥಿತಿಯಿಂದ ಕಾರ್ಯಕ್ರಮದ ಮೆರುಗು ಅಲಂಕರಿಸಲ್ಪಟ್ಟಿತು. ಎಂಆರ್‌ಪಿಎಲ್ ನ ಸಿಎಸ್‌ಆರ್  ವಿಭಾಗದ ಹಿರಿಯ ವ್ಯವಸ್ಥಾಪಕ ಕೆ. ನಾಗರಾಜ್ ರಾವ್ ಅವರು ಮುಖ್ಯ ಅತಿಥಿಯಾಗಿ ಹಾಜರಿದ್ದು ಎಂಆರ್‌ಪಿಎಲ್ ಒಎನ್‌ಜಿಸಿ ಮಂಗಳೂರಿನ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್ ಅವರ ಪರವಾಗಿ  ರಿಬ್ಬನ್ ಕತ್ತರಿಸುವ ಮೂಲಕ ಹೊಸ ಸೌಲಭ್ಯವನ್ನು ಉದ್ಘಾಟಿಸಿದರು. ನೆರೆದ ಅತಿಥಿಗಳು ದೀಪ ಬೆಳಗಿಸಿ ಹಾಗೂ ವನಮಹೋತ್ಸವ ಸಾಂಕೇತಿಸಲು ಗಿಡನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಮಂಗಳೂರಿನ  ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಜಾನ್ ಬಿ. ಮೊಂತೆರೊ, ಉದ್ಯಾವರ ಮಾಡ ಅರಸು ಮಂಜಿಹ್ನಾರ್ ಕ್ಷೇತ್ರದ ರಾಜ ಬಲ್ಚಡ, ಸ್ನೇಹಾಲಯದ ಚಾಪ್ಲಿನ್ ರೆವರೆಂಡ್ ಫಾದರ್ ಸಿರಿಲ್ ಡಿ’ಸೋಜಾ,

 ಮಂಗಳೂರಿನ ಪ್ರೇರಣಾ ಭಾಷಣಕಾರರಾದ ರಫೀಕ್ ಮಾಸ್ಟರ್,  ಉಪಸ್ಥಿತರಿದ್ದರು. ಸ್ನೇಹಾಲಯದ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ತಾ ಅವರು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಜಿಯೋ ಡಿಸಿಲ್ವಾ ಅವರು ನೀರೂಪಿಸಿದರು.

Related Posts

Leave a Reply

Your email address will not be published.