ಮಣಿಪಾಲದ ಈಜ಼ಿ ಬೈ ಮಳಿಗೆಯಿಂದ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ
ಉಡುಪಿ-ಮಣಿಪಾಲ ಮುಖ್ಯರಸ್ತೆಯಲ್ಲಿರುವ ನಗರದ ಈಜ಼ಿ ಬೈ ಸ್ಟೋರ್ ಕರ್ನಾಟಕದಲ್ಲಿನ 25ನೇ ಸ್ಟೋರ್ ಮತ್ತು ದೇಶದಲ್ಲಿ 125 ನೇ ಈಜ಼ಿ ಬೈ ಸ್ಟೋರ್ ಆಗಿದೆ. ಇದೀಗ ಮಣಿಪಾಲದ ಈಜ಼ಿ ಬೈ ಮಳಿಗೆ ಹಾಗೂ ಉಡುಪಿಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಮಳಿಗೆಯಲ್ಲಿ ತನ್ನ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ ಘೋಷಿಸಿದ್ದು, 4,000 ರೂಪಾಯಿಗಳ ಬಟ್ಟೆ ಅಥವಾ ಇತರೆ ವಸ್ತುಗಳನ್ನು ಖರೀದಿಸಿದ ಗ್ರಾಹಕರು ಕೇವಲ 2,000 ರೂಪಾಯಿಗಳನ್ನು ಪಾವತಿಸಿ, ಕೊಡುಗೆಯ ಲಾಭವನ್ನು ಪಡೆಯಬಹುದಾಗಿದೆ.
ಡಿಸೆಂಬರ್ 2 ರಿಂದ 4 ರ ವರೆಗೆ ರಾಜ್ಯದ ಎಲ್ಲಾ ಈಜ಼ಿ ಬೈ ಮಳಿಗೆಗಳಲ್ಲಿ ಈ ಕೊಡುಗೆ ಇರಲಿದ್ದು, ಮಳಿಗೆಯಲ್ಲಿರುವ ಎಲ್ಲಾ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಈ ವಿಶಾಲವಾದ ಮಳಿಗೆಯಲ್ಲಿ ಇಡೀ ಕುಟುಂಬ ಬಯಸುವ ಟ್ರೆಂಡಿ ಫ್ಯಾಶನ್ ಬಟ್ಟೆಗಳು ಲಭ್ಯವಿದೆ. ದುಬೈನ ಲ್ಯಾಂಡ್‌ಮಾರ್ಕ್ ಗ್ರೂಪ್ ಆರಂಭಿಸಿದ ಈಜ಼ಿ ಬೈ ಸ್ಟೋರ್‍ಸ್ ದೇಶದ ಮೆಟ್ರೋ ಮತ್ತು ನಾನ್-ಮೆಟ್ರೊ ಮಾರುಕಟ್ಟೆಗಳು ಸೇರಿದಂತೆ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ, ಉತ್ತರಖಂಡ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಈಜ಼ಿ ಬೈ, ಕರ್ನಾಟಕದಾದ್ಯಂತ ಒಟ್ಟು ೨೫ ಸ್ಟೋರ್‍ಸ್‌ಗಳನ್ನ ಹೊಂದಿದೆ. ಗ್ರಾಹಕರಿಗೆ ಅತ್ಯದ್ಭುತ ಶಾಪಿಂಗ್ ಅನುಭವವನ್ನು ನೀಡಿ, ಜನಮನ ಸೆಳೆದಿದೆ.