ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಕೆ. ಗೋಪಾಲ ಪೂಜಾರಿ ಭೇಟಿ : ತಡೆಗೋಡೆಗೆ ಬೇಕಾದ ಅಗತ್ಯ ಕ್ರಮ ವಹಿಸಲು ಮನವಿ

ಕುಂದಾಪುರ: ಕಾಲಿನ ಶಸ್ತೃಚಿಕಿತ್ಸೆಗೊಳಗಾಗಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರೂ ಊರುಗೋಲಿನ ಸಹಾಯದಿಂದ ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದರು.ಪಕ್ಷದ ಮುಖಂಡರೊಂದಿಗೆ ಕಡಲ್ಕೊರೆತ ಪ್ರದೇಶ ಮರವಂತೆಗೆ ಭೇಟಿ ನೀಡಿದ ಅವರು, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆಯಲ್ಲಿ ಮಾತನಾಡಿದ ಸ್ಥಳೀಯರು ಕಳೆದ ಹನ್ನೆರಡು ದಿನಗಳಿಗೂ ಅಧಿಕ ಈ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೆಂಗಿನ ಮರಗಳು ಸಮುದ್ರಪಾಲಾಗುತ್ತಿವೆ. ಸಂಬಂಧಪಟ್ಟ ಶಾಸಕರು ಜನಪ್ರತಿನಿಧಿಗಳು ಈ ಭಾಗಕ್ಕೆ ಭೇಟಿ ನೀಡುವ ಕನಿಷ್ಠ ಸೌಜನ್ಯವೂ ತೋರಿಲ್ಲ. ಅಧಿಕಾರಿಗಳಿಗೆ ಪರಿಸ್ಥಿತಿ ತಿಳಿಹೇಳಿದರೆ ಹಣವಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ. ಹೀಗಾಗಿನಾವೇ ಹಣ ಸಂಗ್ರಹಿಸಿ ಚೀಲಗಳಲ್ಲಿ ಮರಳು ತುಂಬಿ ತಡೆಗೋಡೆ ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ ಎಂದರು.ಸ್ಥಳದಲ್ಲೇ ಉಡುಪಿ ಜಿಲ್ಲಾಧಿಕಾರಿಗೆ ಕರೆ ಮಾಡಿದ ಮಾಜಿ ಶಾಸಕ ಪೂಜಾರಿ, ತಕ್ಷಣವೇ ತಡೆಗೋಡೆಗರ ಬೇಕಾದ ಅಗತ್ಯ ಕ್ರಮಗಳನ್ನು ವಹಿಸಲು ಮನವಿ ಮಾಡಿಕೊಂಡರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ ಬೈಂದೂರು, ಮದನ್ ಕುಮಾರ್, ಅರವಿಂದ ಪೂಜಾರಿ, ಸ್ಥಳೀಯ ಮುಖಂಡರಾದ ಗಣೇಶ್ ಪೂಜಾರಿ, ರಾಮಕೃಷ್ಣ, ಜಗದೀಶ್ ದೇವಾಡಿಗ, ವಿನಾಯಕರಾವ್, ಚಂದ್ರಗುಪ್ತ, ಸಂಜು ಖಾರ್ವಿ, ಹರೀಶ್ ಪೂಜಾರಿ, ವಾಸು ಖಾರ್ವಿ ಮೊದಲಾದವರು ಇದ್ದರು.

Related Posts

Leave a Reply

Your email address will not be published.