ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ : ಗೃಹ ನಿರ್ಮಾಣಕ್ಕೆ ರೂ 15 ಲಕ್ಷ ಸಾಲ

ಮೂಡುಬಿದಿರೆ : ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ಸಿ)ಯು 2021-22ನೇ ಸಾಲಿನಲ್ಲಿ ರಲ್ಲಿ ಹದಿಮೂರು ಲಕ್ಷದ ಎರಡು ಸಾವಿರದ ಐನೂರ ಅರವತ್ತ ಒಂಭತ್ತು ರಷ್ಟು ಲಾಭಾಂಶವನ್ನು ಹೊಂದಿರುತ್ತದೆ. ಈ ಸಾಲಿನ ಸದಸ್ಯರಿಗೆ ಶೇ 12 ಡಿವಿಡೆಂಡ್ ನೀಡಲು ಆಡಳತ ಮಂಡಳಿ ಶಿಫಾರಸ್ಸು ಮಾಡಿದೆ ಹಾಗೂ ಈ ಹಿಂದೆ ಸಂಘದ ಸದಸ್ಯರುಗಳಿಗೆ ಮನೆ ರಿಪೇರಿಗಾಗಿ ರೂ ಲಕ್ಷವನ್ನು 5 ನೀಡುತ್ತಿತ್ತು ಇದೀಗ ಈ ವರ್ಷದಿಂದ ನಮ್ಮ ಗ್ರಾಹಕರಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕೆ ರೂ 15 ಲಕ್ಷ ಸಾಲವನ್ನು ನೀಡುವುದಾಗಿ ಮತ್ತು ಲೆಕ್ಕ ಪರಿಶೋಧಕರಾಗಿ ಬಾಲಕೃಷ್ಣ ಭಟ್ ಅವರ ನೇಮಕವನ್ನು ಸಹಕಾರಿಯ ಅಧ್ಯಕ್ಷ ರಂಜತ್ ಪೂಜಾರಿ ಘೋಷಿಸಿದರು.

ಅವರು ಸಮಾಜ ಮಂದಿರದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಳೆದ 2ವರ್ಷ ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಅಶಕ್ತ 27 ಕುಟುಂಬಳಿಗೆ ಸಹಕಾರಿಯ ವತಿಯಿಂದ ಸಹಾಯಹಸ್ತ ನೀಡಲಾಗಿದೆ. ಸಂಘದ ಸದಸ್ಯರು ಯಾರಾದರೊಬ್ಬರು ಅಕಸ್ಮಿಕವಾಗಿ ಮರಣ ಹೊಂದಿ ದರೆ ತಂಡದ ಸದಸ್ಯರಿಗೆ ಸಾಲದ ಹೊರೆ ಬಾಧಿಸಬಾರದೆಂಬ ಉದ್ದೇಶದಿಂದ ಮೃತಪಟ್ಟ ವ್ಯಕ್ತಿಯ ಸಾಲವನ್ನು ತುಂಬಲು ನಮ್ಮ ಸಂಸ್ಥೆಯು ಬದ್ಧವಾಗಿರುತ್ತದೆ ಎಂದು ಹೇಳಿದರು. ಸನ್ಮಾನ : ಸಹಕಾರಿಯ ಉತ್ತಮ ಗ್ರಾಹಕರಾದ ಪೂವಪ್ಪ ಕುಂದರ್, ಚೆನ್ನಪ್ಪ ಪರವ, ಶಶಿಧರ್ ಎಸ್.ಶೆಟ್ಟಿ, ಸಂತೋಷ್ ಪೂಜಾರಿ, ಗಣೇಶ, ರಾಜು ಕೊಂಡಿಬಾ ಮಾಣಿ ಹಾಗೂ ಸಂತೋಷ್ ಎಂ.ಆಚಾರ್ಯ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು. ಅತೀ ಹೆಚ್ಚು ಪಿಗ್ಮಿ ಸಂಗ್ರಾಹಕರಾಗಿರುವ ದಿನೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿನಾಯಕ ತಂಡದ ಸದಸ್ಯರ ಮಗಳಾದ ಪದ್ಮಾವತಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ರಾಜಶೇಖರ್ ಮಧ್ಯಸ್ಥ ಅವರು 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಲ್ಲಿ ಒಟ್ಟು 1991 ಸದಸ್ಯರಿದ್ದು ಸದಸ್ಯರ ಪಾಲು ಬಂಡವಾಳ 18,57,500 ಇರುತ್ತದೆ. ಕಳೆದ ಸಾಲಿಗಿಂತ 37,300 ಪಾಲು ಬಂಡವಾಳ ವೃದ್ಧಿಯಾಗಿದೆ ಎಂದು ತಿಳಿಸಿದರು. ಸಹಕಾರಿಯ ನಿರ್ದೇಶಕರಾದ ರತ್ನಾಕರ ಪೂಜಾರಿ ಸ್ವಾಗತಿಸಿ 20?21ನೇ ಸಾಅನ ಮಹಾಸಭೆಯ ನಡವಳಿಕೆಗಳನ್ನು ವಾಚಿಸಿದರು. ಶಂಕರನಾರಾಯಣ ಭಟ್ ಅವರು ಲೆಕ್ಕ ಪರಿಶೋಧನೆಯ ಪಾಲನಾ ವರದಿಯನ್ನು ಮಂಡಿಸಿದರು. ಇನ್ನೋರ್ವ ನಿರ್ದೇಶಕ ರಾಜೆಂದ್ರ ಜಿ.ಅವರು 20-21ಸಾಲಿನ ಲಾಭಾಂಶ ವಂಗಡನೆಯನ್ನು ಸಭೆಗೆ ಮಂಡಿಸಿದರು. ಸಿಬಂದಿಗಳಾದ ಗಣೇಶ್ ಆರ್.ನಾಯ್ಕ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ಸ್ವಾತಿ ಅವರು ಬಜೆಟ್‍ಗಿಂತ ಜಾಸ್ತಿ ಆದ ಖರ್ಚಿಗೆ ಮಂಜೂರಾತಿಯನ್ನು ಕೇಳದರು. ಪ್ರತಿಭಾ ಅವರು 22-23ನೇ ಸಾಲಿನ ಬಜೆಟನ್ನು ಮಂಡಿಸಿದರು. ರೇಖಾ ತಂಡಗಳನ್ನು ಗುರುತಿಸಿದರು. ನಿರ್ದೇಶಕರುಗಳಾದ, ಹೇಮಾ ಕೆ.ಪೂಜಾರಿ, ನಾಗೇಶ್ ನಾಯ್ಕ, ಶರತ್ ಜೆ.ಶೆಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಉಷಾ ವಂದಿಸಿದರು.

Related Posts

Leave a Reply

Your email address will not be published.