ಟೋಲ್‍ಗೇಟ್ ಹೋರಾಟ ಸಮಿತಿಯಿಂದ ಸಾಮೂಹಿಕ ಧರಣಿ ಆರಂಭ
ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಧರಣಿಯಲ್ಲಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರಜೈನ್, ಹೋರಾಟ ಸಮಿತಿಯ ಸಹ ಸಂಚಾಲಕ ರಾಘವೇಂದ್ರ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಮೂಸಬ್ಬ ಪಕ್ಷಿಕೆರೆ, ಮೊಯ್ದಿನ್ ಬಾವಾ, ಮಿಥುನ್ ರೈ, ದಿನೇಶ ಕುಂಪಳ, ರಮೇಶ್, ದಿನೇಶ್ ಹೆಗ್ಡೆ ಉಳೆಪಾಡಿ, ರಮೇಶ್ ಶಿಯಾನ್, ಪಿ. ಮೊಹನ್, ಮಾಜಿ ಮೇಯರ್ ಶಶಿದರ ಹೆಗಡೆ, ಗುಲ್ಝಾರ್ ಬಾನು, ಎಂ.ಜಿ. ಹೆಗ್ಡೆ, ವಸಂತ್ ಬರ್ನಾರ್ಡ್, ಶೇಖರ ಹೆಜಮಾಡಿ, ರಾಲ್ಫಿ ಡಿಕೋಸ್ತಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.