ಛಾಯಾಗ್ರಾಹಕ ಜಿನೇಶ್ ಪ್ರಸಾದ್ ಗೆ “ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿಗೆ ಆಯ್ಕೆ

ಮೂಡುಬಿದಿರೆ: ಸಿಂಗಾಪುರದಲ್ಲಿ ನಡೆದ ಏಷ್ಯನ್ ಫೋಟೋಗ್ರಾಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ಸಿಂಗಪುರ್ ಜಂಟಿ ಆಶ್ರಯದಲ್ಲಿ ನಡೆದ “ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿಗೆ ಜಿನೇಶ್ ಪ್ರಸಾದ್ ಮೂಡುಬಿದಿರೆ ಅವರು ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೊದಲು ವಿಶ್ವದ ವಾರ್ಷಿಕ ಟಾಪ್ ಟೆನ್ ಛಾಯಾಚಿತ್ರಗಾರ ಮತ್ತು ಪ್ರದರ್ಶನಗಾರರಾಗಿ ಅರ್ಹತೆ ಹೊಂದಿರಬೇಕಾಗುತ್ತದೆ. ಜಿನೇಶ್ ಪ್ರಸಾದ್ ಅವರು ಸತತವಾಗಿ ಮೂರು ವರ್ಷಗಳಿಂದ ಟಾಪ್ ಟೆನ್ ಛಾಯಾಚಿತ್ರ ಪ್ರದರ್ಶನಗಾರರ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ವರ್ಷದಲ್ಲಿ 12 ಸ್ಪರ್ಧೆಗಳಲ್ಲಿ ಸತತವಾಗಿ ಅತಿ ಹೆಚ್ಚಿನ ಸಂಖ್ಯೆಯ ಛಾಯಚಿತ್ರಗಳು ಅವಾರ್ಡ್ ವಿಜೇತರಾಗಿ ಛಾಯಾಚಿತ್ರಗಳು ಪ್ರದರ್ಶನಗೊಂಡಿರಬೇಕಾ ಗಿರುತ್ತದೆ. ಜಿನೇಶ್ ಪ್ರಸಾದ್ ಅವರು ಸತತ ಮೂರು ವರುಷಗಳಿಂದ ಈ ಎಲ್ಲಾ ಅರ್ಹತೆಗಳನ್ನು ಗಳಿಸಿದ್ದು ಈ ಬಾರಿ ಅಂದರೆ 2023ನೇ ಸಾಲಿನ ಗೋಲ್ಡ್ ಆಫ್ ಗೋಲ್ಡನ್ ಮೆಡಲ್ ಅವಾರ್ಡ್ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Posts

Leave a Reply

Your email address will not be published.