ಕಟೀಲು ಕ್ಷೇತ್ರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ

ಮಂಗಳೂರು ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಅವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಶೇಷವಸ್ತ್ರ ಪ್ರಸಾದ ನೀಡಿ ಗೌರವಿಸಿದರು. ಬಳಿಕ ಸಂಸದರು ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ ಮಂತ್ರಿಯಾದ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಈಗಾಗಲೇ ಪ್ರಮಾಣ ವಚನ ತೆಗೆದುಕೊಂಡು ಅವರು ಮಂತ್ರಿಮಂಡಲದ ರಚನೆ ಕೂಡ ಮಾಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಭಾರತ ವಿಕಸಿತ ಭಾತರದ ಕಡೆಗೆ ಹೆಜ್ಜೆ ಹಾಕಲಿಕ್ಕಿರುವ ಈ ವಿಶೇಷವಾದ ಸಂಧರ್ಬದಲ್ಲಿ ತಾಯಿ ದುರ್ಗಾಪರಮೇಶ್ವರಿ ತಾಯಿ ಭ್ರಮರಾಂಭಿಕೆಯ ಹತ್ತಿರ ಬಂದು ಅವರ ಆಶೀರ್ವಾದ ಬೇಡಲು ಬಂದಿರುತ್ತೇನೆ. ತುಳುನಾಡಿನ ದೈವ ದೇವರ ಆಶೀರ್ವಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಇರಲಿ ಅವರ ಸಚಿವ ಸಂಪುಟದ ಮೇಲೆ ಇರಲಿ ಎಂದು ತಾಯಿ ಉಳ್ಳಲ್ದಿ ಅವರಲ್ಲಿ ನನ್ನ ಪ್ರಾರ್ಥನೆ ಎಂದರು.ಈ ಸಂಧರ್ಭದಲ್ಲಿ ದೇವಳದ ಅಸ್ರಣ್ಣ ಬಂಧುಗಳು,ದೇವಳದ ಆಡಳಿತ ಮಂಡಳಿ ಪ್ರಮುಖರು, ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ದಿತರಿದ್ದರು.

add - karnataka ayurveda

Related Posts

Leave a Reply

Your email address will not be published.