ಜಾಂಬೂರಿಯಲ್ಲಿ ಸೌತ್ ಕೊರಿಯಾವನ್ನು ಪ್ರತಿನಿಧಿಸಿದ ತಾಯಿ ಮಗ

ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ ಸ್ಕೌಟ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ಸೌತ್ ಕೊರಿಯಾದಿಂದ ತಾಯಿ ಮಗ ಪ್ರತಿನಿಧಿಸಿದ್ದಾರೆ.ಒಟ್ಟು 7 ಜನ ಪ್ರತಿನಿಧಿಗಳು 2 ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿರುವುದಾಗಿ ತಿಳಿಸಿದ ಚಾ ಸಾಂಗೋಕ್, ಇಲ್ಲಿ ನಡೆಯುತ್ತಿರುವ ಸ್ಕೌಟ್ಸ್ ಗೈಡ್ಸ್ ನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿಗೆ ಹಿತವನ್ನು ನೀಡಿದೆ. ಊಟೋಪಚಾರದ ವ್ಯವಸ್ಥೆಯು ಅಚ್ಚುಕಟ್ಟುತನದಿಂದ ನಡೆಯುತ್ತಿದೆ. ಇಲ್ಲಿನ ಇಡ್ಲಿ, ದೋಸೆ, ಚಪಾತಿ ಮತ್ತು ಇತರ ಆಹಾರ ವಸ್ತುಗಳು ಇಷ್ಟವಾಯಿತು. ಮುಂದಿನ ಆಗಸ್ಟ್ ತಿಂಗಳಿನಲ್ಲಿ ಸೌತ್ ಕೊರಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವಕ್ಕೆ ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಾ ಸಾಂಗೋಕ್ ನ ತಾಯಿ ಲೀಸಾ ಕೀಮ್ ಇದ್ದರು.

Related Posts

Leave a Reply

Your email address will not be published.