ತೋಡಾರು ದೈವಸ್ಥಾನಕ್ಕೆ ಅಪೂರ್ವ ಕೆತ್ತನೆಯ ಪುಷ್ಪ ದಂಡಿಗೆ ಸಮರ್ಪಣೆ

ಮೂಡುಬಿದಿರೆ : ದೈವಗಳಿಗೆ ಹಾಕಿದ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡಲು ಅಪೂರ್ವ ಕೆತ್ತನೆಯ ” ಪುಷ್ಪ ದಂಡಿಗೆ ” ಯನ್ನು ತೋಡಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಕಾರಮೊಗರು ಗುತ್ತು ಪ್ರೇಮನಾಥ ಮಾರ್ಲರು ಶುಕ್ರವಾರ ಸೇವಾರೂಪವಾಗಿ ಸಮರ್ಪಿಸಿದರು.

ಮೂಡುಬಿದಿರೆ ದೇವಕೀ ಲಕ್ಷ್ಮಿ ಮಿಲ್ ನ ಮಾಲಕರಾಗಿರುವ ಪ್ರೇಮನಾಥ ಮಾರ್ಲ ಅವರು ತಮ್ಮದೇ ಮಿಲ್ ನಲ್ಲಿ ನಿರ್ಮಿಸಿರುವ ಈ ಪುಷ್ಪ ದಂಡಿಗೆಯು ಸುಂದರವಾದ ಹಾಗೂ ಅಪೂರ್ವವಾದ ಕೆತ್ತನೆಯಿಂದ ಕೂಡಿದೆ . ಉತ್ತಮ ಗುಣಮಟ್ಟದ ಮರದಿಂದ ನಿರ್ಮಿಸಿದ ಈ ಪುಷ್ಪದಂಡಿಗೆಯು ಆನೆಯ ನಾಲ್ಕು ಕಾಲುಗಳನ್ನು , ಮೇಲ್ಭಾಗದಲ್ಲಿ ಆನೆಗಳ ನಾಲ್ಕು ಸೊಂಡಿಲುಗಳನ್ನು ಹೊಂದಿದ್ದು , ಈ ಸೊಂಡಿಲಿನಲ್ಲೇ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡುವ ರೀತಿಯಲ್ಲಿ ನಿರ್ಮಿಸಲಾಗಿದೆ .ಪುಷ್ಪಗಳ ಹಾರಗಳನ್ನು ಸಂಗ್ರಹಿಸಿ ಇಡುವ ಈ ಪುಷ್ಪ ದಂಡಿಗೆಯ ಕಲ್ಪನೆ ಪ್ರೇಮನಾಥ ಮಾರ್ಲರದ್ದೇ ಆಗಿದ್ದು , ಈ ರೀತಿಯ ಪುಷ್ಪ ದಂಡಿಗೆಯು , ದಕ್ಷಿಣ ಕನ್ನಡ ಜಿಲ್ಲೆಯ ದೈವಸ್ಥಾನಗಳಲ್ಲಿ , ಬಹುಶಃ , ಇದೇ ಪ್ರಥಮವಾಗಿದ್ದಿರಬಹುದು .

ಈ ಪುಷ್ಪ ದಂಡಿಗೆಯನ್ನು ಪ್ರೇಮನಾಥ ಮಾರ್ಲರ ಪರವಾಗಿ ಅವರ ಸುಪುತ್ರರಾದ ಶ್ರೀ ಹಾನ್ಯಗುತ್ತು ಭುವನ್ ವೈಷ್ಣವ ಮಾರ್ಲ ಸಮರ್ಪಿಸಿದರು. ಕಾರಮೊಗರುಗುತ್ತು ಕಿರಣ್ ಕುಮಾರ್ ಮಾರ್ಲ , ಹಾನ್ಯಗುತ್ತು ಮನೋಜ್ ಶೆಟ್ಟಿ , ಯಕ್ಷಗಾನ ವಿಮರ್ಶಕರು ಹಾಗೂ ಯಕ್ಷಸಂಗಮ ಮೂಡುಬಿದಿರೆಯ ಸಂಚಾಲಕರಾದ ಎಂ.ಶಾಂತರಾಮ ಕುಡ್ವ , ಹಾನ್ಯಗುತ್ತು ರಿತೇಶ್ ಶೆಟ್ಟಿ , ಪಟ್ಲ ಫೌಂಡೇಶನ್ ಮೂಡುಬಿದಿರೆ ಘಟಕದ ಸಕ್ರಿಯ ಸದಸ್ಯರಾದ ಪುನೀತ್ ಕಟ್ಟೆಮಾರು , ವಾಸುದೇವ , ಮನೋಜ್ ಪೂಜಾರಿ , ಹಾಗೂ ಇನ್ನಿತರರು ಉಪಸ್ಥಿತರಿದ್ದರು .

Related Posts

Leave a Reply

Your email address will not be published.