ಪಡುಮಾರ್ನಾಡು ರಸ್ತೆ, ಗದ್ದೆಗಳಲ್ಲಿ ಜಲಾವೃತ
ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿಯ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಎಸ್‌ಕೆಎಫ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ.
ಪೋಯ್ಯದ ಪಲ್ಕೆ ಬಳಿ ಪ್ರವಾಹದಿಂದ ರಸ್ತೆ ಹಾಗೂ ಗದ್ದೆಗೆ ನೀರು ನುಗ್ಗಿ ಹಾನಿ, ಕೆಂಪುಲು ಬಳಿ ಮಳೆಯಿಂದ ರಸ್ತೆಗೆ ಹಾನಿ, ಕೆಸರ್ ಗದ್ದೆ ವಿಕ್ಟರ್ ಮನೆ ಬಳಿ ಮಳೆಯ ಪ್ರವಾಹ ದಿಂದ ಮೋರಿ ಬ್ಲಾಕ್ ಆಗಿ ಜಮೀನಿಗೆ ನೀರು ಬಂದು ಹಾನಿಯಾಗಿದೆ. ಅಂಬೂರಿ ಬಳಿಯ ಕಿರಣ್ ಎಂಬವರ ಮನೆಗೆ ರಸ್ತೆಯ ನೀರು ಅಂಗಳಕ್ಕೆ ಬಂದು ಹಾನಿ ಸಹಿತ ಹಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು.
ಈ ಪ್ರದೇಶಗಳಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಬಿ, ಪಡುಮಾರ್ನಾಡು ಗ್ರಾ. ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಸದಸ್ಯ ಮಹಮ್ಮದ್ ಅಸ್ಲಾಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ, ಸಿಬ್ಬಂದಿಗಳು ಭೇಟಿ ನೀಡಿ ತುರ್ತು ತಾತ್ಕಾಲಿಕ ಪರಿಹಾರವನ್ನು ಒದಗಿಸಿದರು