ಹೆಜಮಾಡಿ ಗ್ರಾ.ಪಂ.ನಿಂದ ಟೋಲ್ ಹೋರಾಟ ಹತ್ತಿಕ್ಕುವ ತಂತ್ರ : ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪ

ಟೋಲ್ ವಿರುದ್ಧ ಹೋರಾಟಕ್ಕೆ ದಿನ ನಿಗದಿಯಾಗಿದ್ದರೂ ಅದೇ ದಿನ ಹೆಜಮಾಡಿ ಗ್ರಾ.ಪಂ. ಆಢಳಿತ ಮಂಡಳಿ ಗ್ರಾಮಸಭೆಗೆ ದಿನ ನಿಗದಿ ಪಡಿಸುವ ಮೂಲಕ ಟೋಲ್ ವಿರುದ್ಧ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂಬುದಾಗಿ ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪಿಸಿದ್ದಾರೆ.
ಟೋಲ್‍ನಿಂದಾಗಿ ಹೆಜಮಾಡಿಯ ಜನತೆ ಕೂಡಾ ಸಮಸ್ಯೆ ಅನುಭವಿಸುತ್ತಿದ್ದು, ಗ್ರಾ.ಪಂ. ಜನಪರ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದ್ದರೂ ಪರೋಕ್ಷವಾಗಿ ತಮ್ಮ ಬಿಜೆಪಿ ಪಕ್ಷದ ನಿಲುವನ್ನು ಬೆಂಬಲಿಸುವ ಮೂಲಕ ಜನರ ವಿರೋಧ ಕಾರ್ಯಚರಿಸಿದಂತ್ತಾಗಿದೆ ಎಂಬುದಾಗಿ ಆಂತಕ ವ್ಯಕ್ತ ಪಡಿಸಿದ್ದಾರೆ.
