ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆ : ದ.ಕ. ಜಿಲ್ಲೆ ಮೂವರಿಗೆ ಬಹುಮಾನ

ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆ:ಅವಿಭಜಿತ ದ.ಕ. ಜಿಲ್ಲೆಯ ಮೂವರಿಗೆ ಬಹುಮಾನ ,ಆಂಧ್ರ ಪ್ರದೇಶ ಪೋಟೋಗ್ರಫಿ ಅಕಾಡೆಮಿ ಆಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಕರ್ನಾಟಕದ ಪಂಚ ಛಾಯಾಗ್ರಾಹಕರ ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು ಇವರ ಪೈಕಿ ಮೂವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಕಳುಹಿಸಿದ ಚಿತ್ರಕ್ಕೆ ಬಹುಮಾನ ಲಭಿಸಿದೆ.

ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್, ಮೂಡಬಿದ್ರೆಯ ಮಾನಸ ಪೋಟೋಗ್ರಫಿಯಾ ರವಿ ಕೋಟ್ಯಾನ್, ಜಿನೇಶ್ ಪ್ರಸಾದ್ ಬೆಂಗಳೂರಿನ , ಸತೀಶ್ ಎಚ್ . ಶಿವು ಅವರ ಚಿತ್ರಗಳಿಗೆ ಪ್ರಶಸ್ತಿ ಪ್ರಾಪ್ತವಾಗಿದೆ.75 ಚಿತ್ರಗಳ ಕಾಫಿಟೆಬಲ್ ಪುಸ್ತಕವನ್ನು ಹೊರತರಲಿದ್ದು ಅದು ಅತಿ ಶೀಘ್ರವಾಗಿ ಬಿಡುಗಡೆಯಾಗಲಿದೆ ಎಂದು ಅಕಾಡೆಮಿ ತಿಳಿಸಿದೆ.

ವರದಿ: ಜಯಂತ್ ಐತಾಳ್ ಉಡುಪಿ
97437 80016