ನೆಲ್ಯಾಡಿ ಪ್ರೊಫೆಷನಲ್ ಕೊರಿಯರ್ ನ ಶೆಬಿನ್ ನೇಣಿಗೆ ಶರಣು
ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಮೊರಂಕಲ ನಿವಾಸಿ ಶೆಬಿನ್ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನೆಲ್ಯಾಡಿ ಯಲ್ಲಿ ಪ್ರೊಫೆಷನಲ್ ಕೊರಿಯರನ್ನು ನಡೆಸುತ್ತಿದ್ದ ಇವರು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜೇಶ್, ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಬಾಲಕೃಷ್ಣ ಹಾಗೂ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. ಮೃತರು ತಾಯಿ ಎಲ್ಸಮ್ಮ, ಸಹೋದರ ಲಿಜೊ ರವರನ್ನು ಅಗಲಿದ್ದಾರೆ.