ಎನ್‌ಐಟಿಕೆ ಹಳೆಯ ವಿದ್ಯಾರ್ಥಿ ಮತ್ತು ಎನ್‌ಸಿಸಿ ಕೆಡೆಟ್ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನೇಮಕ

ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ)ಯಿಂದ 2024 ರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಮತ್ತು ಎನ್‌ಸಿಸಿ ಮಾಜಿ ಕೆೆಡೆಟ್ ಆಗಿರುವ ಸಬ್ ಲೆಫ್ಟಿನೆಂಟ್ ಅನನ್ಯ ರಾವ್ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿದ್ದಾರೆ.
ಮಂಗಳೂರಿನ ಅನನ್ಯರವರು ನಿವೃತ್ತ ಟೆಲಿಕಾಂ ಅಧಿಕಾರಿ ಸತೀಶ್ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ.
ಎಳಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ 10 ತಿಂಗಳ ತೀವ್ರ ಮಿಲಿಟರಿ ತರಬೇತಿ ಕಾರ್ಯಕ್ರಮದ ನಂತರ, ಮೇ 31ರ, 2025 ರಂದು ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅನನ್ಯ ಅವರನ್ನು ಔಪಚಾರಿಕವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.
ಎನ್‌ಐಟಿಕೆಯಲ್ಲಿ ಎನ್‌ಸಿಸಿ ಕೆಡೆಟ್ ಆಗಿ ಅನನ್ಯ ಅವರ ಅನುಭವ ಮತ್ತು ಇಂಜಿನಿಯರಿಂಗ್‌ನಲ್ಲಿ ಅವರ ಅಡಿಪಾಯವು ದೇಶಕ್ಕೆ ಸೇವೆ ಸಲ್ಲಿಸುವ ತನ್ನ ಆಕಾಂಕ್ಷೆಗೆ ಉತ್ತೇಜನ ನೀಡಿದೆ ಎಂದು ಅನನ್ಯ ರಾವ್ ಪ್ರತಿಕ್ರಿಯಿಸಿದ್ದಾರೆ.
ಅನನ್ಯಾರ ಸಾಧನೆಗೆ ಸಂಸ್ಥೆಯ ನಿರ್ದೇಶಕರು, ಅಧ್ಯಾಪಕರು, ಸಿಬ್ಬಂದಿ ಅಭಿನಂದನೆ ಸಲ್ಲಿಸಿರುವುದಾಗಿ ಎನ್‌ಐಟಿಕೆ ಪ್ರಕಟನೆ ತಿಳಿಸಿದೆ.
