ಓಂ ಕ್ರಿಕೆಟರ್ಸ್ ಪಾವಂಜೆ -16ನೇ ವಾರ್ಷಿಕೋತ್ಸವ

ಹಳೆಯಂಗಡಿ, ಓಂ ಕ್ರಿಕೆಟರ್ಸ್ ಪಾವಂಜೆ ವತಿಯಿಂದ 16ನೇ ವಾರ್ಷಿಕೋತ್ಸವವನ್ನು ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ವೇದಿಕೆಯಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಬ್ರಹ್ಮಶ್ರೀ ನಾರಾಯಣ ಗುರು ಸಂಘ ಹಳೆಯಂಗಡಿ ಇದರ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನಾನಿಲ್, ಜ್ಞಾನಶಕ್ತಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪಾವಂಜೆ ಇಲ್ಲಿನ ಆಡಳಿತ ಮೊಕ್ತೇಸರರಾದ ಶ್ರೀ ಶಶಿಂದ್ರ ಎಂ, ಹಿರಿಯ ಕೃಷಿಕರಾದ ಶ್ರೀ ಶಿವ ಸುವರ್ಣ, ಓಂ ಕ್ರಿಕೆಟರ್ಸ್ ಪಾವಂಜೆ ಅಧ್ಯಕ್ಷರಾದ ಶ್ರೀ ಸುಕೇಶ್ ಪಾವಂಜೆ ಮತ್ತು ಉಪಾಧ್ಯಕ್ಷರಾದ ಶ್ರೀ ಮಿಥುನ್ ಸುವರ್ಣ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಾದ ಶ್ರೀಮತಿ ಮೋಹಿನಿ ಮತ್ತು ಶ್ರೀಮತಿ ವಾಗೇಶ್ವರಿಯವರಿಗೆ ಗುರು ನಮನದ ಮೂಲಕ ಗೌರವ ಸನ್ಮಾನವನ್ನು ನೆರವೇರಿಸಲಾಯಿತು.ಕಲಿಕೆಯಲ್ಲಿ ಸಾಧನೆಯನ್ನು ತೋರಿದ ಕುಮಾರಿ ಮನಿಷಾ ಎನ್ ದೇವಾಡಿಗರವರಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕುಮಾರಿ ಪ್ರಗತಿ ಯವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಆರೋಗ್ಯದ ಕಾಳಜಿಯೊಂದಿಗೆ ಕುಮಾರಿ ಶ್ರೀಯಾ ರವರಿಗೆ ಆರೋಗ್ಯ ನಿಧಿ ವಿತರಿಸುವ ಮೂಲಕ ಆರ್ಥಿಕ ಸಹಕಾರವನ್ನು ನೀಡಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ರಂಗ ತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮವನ್ನು ಶ್ರೀ ಭಾಸ್ಕರ್ ಅಮೀನ್ ತೋಕೂರು ರವರು ನಿರೂಪಿಸಿ, ಈ ಪ್ರಕಾಶ್ ಪಾವಂಜೆಯವರು ಧನ್ಯವಾದವನ್ನು ಸಮರ್ಪಿಸಿದರು

Related Posts

Leave a Reply

Your email address will not be published.