ಅತ್ತ್ಯುತ್ತಮ ತರಬೇತುದಾರ ಪ್ರಶಸ್ತಿ ಗೆ ಜೆಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ M ಪೂಜಾರಿ ಕಾರ್ಕಳ ರವರು ಭಾಜನರಾದರು

ಜೆಸಿಐ ಭಾರತದ ವಲಯ 15 ರ 2024 ರ ಸಾಲಿನಲ್ಲಿ ಕೊಡಮಾಡುವ ಈ ವರ್ಷದ ಅತ್ತ್ಯುತ್ತಮ ತರಬೇತುದಾರ ಪ್ರಶಸ್ತಿ ಗೆ ಜೆಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ M ಪೂಜಾರಿ ಕಾರ್ಕಳ ರವರು ಭಾಜನರಾದರು ಜೇಸಿ ಸುಧಾಕರ್ ಪೂಜಾರಿ ಯವರು 2007 ರಿಂದ ವ್ಯಕ್ತಿತ್ವ ವಿಕಸನ ತರಬೇತುಧಾರರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ, ಉದ್ಯಮಿಗಳಿಗೆ ಜೇಸಿ loins ರೋಟರಿ ಸದಸ್ಯರಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ವ್ಯಕ್ತಿತ್ವ ವಿಕಸನ, ಉಧ್ಯಮ ವಿಕಾಸನಕ್ಕೆ ಪೂರಕ ತರಬೇತಿಗಳನ್ನು ನೀಡುತಾ ಬಂದಿದ್ದಾರೆ ಇವರು ಇತ್ತೀಚೆಗೆ 2024 ರ ಸಾಲಿನಲ್ಲಿ ತಾವೇ ಉದ್ಯಮಿಗಳಿಗೆ ಮಂಡಿಸಿದ BDP -2024 ಎಂಬ ತರಬೇತಿ ಕಾರ್ಯಕ್ರಮಕ್ಕೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನ ದಲ್ಲಿ Junior Chamber Allumni Club ನಿಂದ ರಾಷ್ಟ್ರ ಪ್ರಶಸ್ತಿ ವಲಯ 15 ಕ್ಕೆ ಬಂದಿತ್ತು.

ಮೂಲತ ಕಾರ್ಕಳದವರಾದ ಇವರು ಯುವ ಉದ್ಯಮಿಯಾಗಿ, ಗಿಡಮೂಲಿಕೆ ಉತ್ಪನ್ನಗಳ ಉಪಯೋಗ ಮತ್ತು ಮಾರಾಟದ ಬಗ್ಗೆ ಅರಿವು ಮತ್ತು ಸಂಶೋಧನೆ ಮಾಡುತ್ತಿರುವ ಇವರು ಎಕ್ಕದ ಎಣ್ಣೆ ಎಂಬ ನೋವು ನಿವಾರಕ ತೈಲ ಇಂದು ಕರ್ನಾಟಕದಲ್ಲಿ ಮನೆ ಮಾತಾಗಿರುವ ಉತ್ಪನ್ನವಾಗಿದೆತನ್ನ ಉದ್ಯಮದ ನಡುವೆಯೂ ಸಮಾಜಕ್ಕೆ ತರಬೇತಿ ಸೇವೆಯನ್ನು ನೀಡುತ್ತಿರುವ ಇವರ ಈ ಕೊಡುಗೆಯನ್ನು ಪರಿಗಣಿಸಿ 2024 ರ ಸಾಲಿನ ವಲಯ 15 ಜೆಸಿಐ ಭಾರತ ಕೊಡಮಾಡುವ ಈ *ವರ್ಷದ ಅತ್ತುತ್ತಮ ತರಬೇತುದಾರ ಪ್ರಶಸ್ತಿ ಯನ್ನು*( Outstanding Trainer of Zone for the year of 2024 ) ವಲಯಧ್ಯಕ್ಷ ಜೇಸಿ ಗಿರೀಶ್ S P ಯವರು, ಜೇಸಿ ಸುಧಾಕರ್ M ಪೂಜಾರಿ ಕಾರ್ಕಳ ಇವರಿಗೆ ನೀಡಿ ಗೌರವಿಸಿದರು.

Related Posts

Leave a Reply

Your email address will not be published.