ಪಚ್ಚನಾಡಿಯ 12 ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಪಚ್ಚನಾಡಿಯಲ್ಲಿ ಸುಮಾರು 12 ಕುಟುಂಬಗಳು ಕಾಗದ ಆಯುವ ಕಾಯಕ ಮಾಡುತ್ತಿದ್ದು ಪರೋಕ್ಷವಾಗಿ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ತನ್ನದೇ ಆದ ಕೊಡುಗೆ ಕೊಡುತ್ತಿದ್ದಾರೆ ಇವರೆಲ್ಲ ಮೂಲಭೂತ ಸೌಕರ್ಯದಿಂದ ವಂಚಿತರಗಿದ್ದು ಇಷ್ಟು ವರುಷ ಆಗಿದ್ದರು ಈ ಕುಟುಂಬಗಳು ಟೆಂಟ್ಗಳಲ್ಲಿ ವಾಸವಾಗಿದ್ದು ವಿದ್ಯುತ್ ಸಂಪರ್ಕ ಕಂಡವರಲ್ಲ ಇಲ್ಲಿ ಸುಮಾರು 20ಕ್ಕಿಂತ ಅಧಿಕ ಮಕ್ಕಳು ಶಾಲೆಗೆ ಹೋಗುತ್ತಿದ್ದು ಅವರಿಗೆ ಓದಲು ಕಷ್ಟವಾಗುತಿದೆ ಮತ್ತು

ವಿದ್ಯುತ್ ಇಲ್ಲದೇ ಇರುವುದರಿಂದ ಕಳ್ಳರ ಹಾವಳಿ ಮತ್ತು ವಿಷಕಾರಿ ಹಾವುಗಳು ಮನೆಯ ಒಳಗೆ ಬರುತ್ತಿರುದ್ದು ಆತಂಕದಲ್ಲಿ ದಿನಕಳೆಯುತ್ತಿದ್ದರು ಇದನ್ನು ಮನಗಂಡು ಹಸಿರುದಳ ಇದರ ಸಂಪೂರ್ಣ ಜವಾಬ್ದಾರಿ ವಹಿಸಿ ಪ್ರತಿ ಮನೆಗಳಿಗೆ ಸೋಲಾರ್ ದೀಪ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಿ ಕಾರ್ಯನಿರ್ವಾಹಿಸಿತು apd ಫೌಂಡೇಶನ್ ಮತ್ತು ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಇದರ ಸಹಯೋಗದಲ್ಲಿ ಊರಿನ ದಾನಿಗಳ ಸಹಾಯದಿಂದ ಸುಮಾರು 1ಲಕ್ಷ 26 ಸಾವಿರ ವೆಚ್ಚದಲ್ಲಿ 12 ಮನೆಗಳಿಗೆ ಸೋಲಾರ್ ದೀಪವನ್ನು ಅಳವಡಿಸಲಾಯಿತು.