ಉಳ್ಳಾಲ:ಮನೆಯ ಗಾಡ್ರೆಜ್‌ನೊಳಗಿದ್ದ ಚಿನ್ನಾಭರಣ ಕಳವು ಪ್ರಕರಣ-ಇಬ್ಬರು ಅಪ್ರಾಪ್ತರು ಸೇರಿದಂತೆ ಐವರ ಬಂಧನ

ಮಂಗಳೂರು: ನಗರದ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಮನೆಯೊಂದರ ಗಾಡ್ರೆಜ್‌ನೊಳಗಿದ್ದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ನಿವಾಸಿಗಳಾದ ಶ್ರೇಯಸ್, ತೌಸೀಫ್ ಹಾಗೂ ಉರ್ವ ನಿವಾಸಿ ಪೃಥ್ವಿರಾಜ್ ಬಂಧಿತ ಮೂವರು ಆರೋಪಿಗಳು.

ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8ರಿಂದ ಜೂ.16ರ ಮಧ್ಯಾಹ್ನ 12ರ ನಡುವೆ ನಡುವೆ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಗೆ ಶ್ರೀಧರ್ ದೂರು ನೀಡಿದ್ದರು. ತಮ್ಮ ಮನೆಯ ಬೆಡ್‌ರೂಮ್ ಕಪಾಟಿನಲ್ಲಿಟ್ಟಿದ್ದ ಚಿನ್ನದ ಕರಿಮಣಿ, ನೆಕ್ಲೇಸ್, ಚೈನ್, ಬ್ರಾಸ್‌ಲೈಟ್, ಉಂಗುರಗಳು, ಕಿವಿಯೋಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಅಧಿಕ ಮೌಲ್ಯದ 32 ಪವನ್‌ಗಿಂತಲೂ ಹೆಚ್ಚು ತೂಕದ ಚಿನ್ನಾಭರಣಗಳನ್ನು ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿರುವ ಪೊಲೀಸರು ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳವುಗೈದಿರುವ ಚಿನ್ನಾಭರಣಗಳನ್ನು ಆರೋಪಿಗಳು ಅಂಗಡಿಗಳಿಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published.