ರೋಷನ್ ಶೆಟ್ಟಿ ಅಭಿನಯದ “ಪಯಣ” ಆಲ್ಬಮ್ ಸಾಂಗ್ ಬಿಡುಗಡೆ

ಟೆಲಿ ಚಿತ್ರ ಆಲ್ಬಾಂ ಹಾಡುಗಳ ಮೂಲಕ ಜನಮನ್ನಣೆ ಪಡೆದ ಹರ್ಷಿತ್ ಸೋಮೇಶ್ವರ ಅವರು ಮತ್ತೊಂದು ಹೊಸ ಪ್ರಯೋಗಕ್ಕೆ ಸಜ್ಜಾಗಿದ್ದು, ಅವರ ನಿರ್ದೇಶನದಲ್ಲಿ ಪಯಣ ಎಂಬ ಕನ್ನಡ ಆಲ್ಬಾಂ ಸಾಂಗ್ ಇದೇ ಭಾನುವಾರ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಳ್ಳಲಿದೆ. ಕನ್ನಡ ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕೀ ವೈಭವ್ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಟೆಲಿ ಚಿತ್ರ ತಂಡ ಈ ಹಾಡಿನ ರಚನೆಯನ್ನು ಮಾಡಿರುವುದು ಸುದೇಶ್ ಪೂಜಾರಿ ಹಾಗೂ ಸಂಗೀತ ನಿರ್ದೇಶನ ಮಾಡಿರುವುದು ರೋಹಿತ್ ಪೂಜಾರಿ ಅವರು, ಈ ಪಯಣದಲ್ಲಿ ರೋಷನ್ ಶೆಟ್ಟಿ ಮತ್ತು ಕಾಜಲ್ ಕುಂದರ್ ಇವರುಗಳು ಬಣ್ಣ ಹಚ್ಚಿದ್ದಾರೆ. ಗಿರಿಗಿಟ್ ಚಿತ್ರದಲ್ಲಿ ಖಳನಾಯಕನಾಗಿ ಎಲ್ಲ ಮನಸೆಳೆದ ರೋಷನ್ ಶೆಟ್ಟಿ ಈ ಬಾರಿ ನಾಯಕ ನಟರಾಗಿ ಪಯಣಿಸಲಿದ್ದಾರೆ. ಈ ಹಾಡಿನಲ್ಲಿ ಅರುಣ್ ರೈ ಪುತ್ತೂ ಕ್ಯಾಮರಾ ಕೈಚಳಕ ತೋರಿಸಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಆಶಿಕ್ ಗೋಪಾಲಕೃಷ್ಣ, ವಿಶ್ವನಾಥ್ ಅಸೈಗೋಳಿ, ಹರ್ಷಿತ್ ಸೋಮೇಶ್ವರ, ಸುಖೇಶ್ ಉಪಸ್ಥಿತರಿದ್ದರು.
