ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ-ಕಚೇರಿಗೆ ಮುತ್ತಿಗೆ ಹಾಕಲು ಸಾರ್ವಜನಿಕರ ನಿರ್ಧಾರ

ಪಡುಬಿದ್ರಿ ಮೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಗ್ರಾಹಕರಿಗೆ ಸೇವೆ ಎಂಬುದು ಮರೀಚಿಕೆಯಾತ್ತಿದೆ ಈ ನಿಟ್ಟಿನಲ್ಲಿ ಅನಿವಾರ್ಯವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಶೀಘ್ರವಾಗಿ ಹಮ್ಮಿಕೊಳ್ಳಲಿದ್ದೇವೆ ಎಂಬುದಾಗಿ ತೆಂಕ ಗ್ರಾ.ಪಂ. ಸದಸ್ಯ ಬಾಲಚಂದ್ರ ಹೇಳಿದ್ದಾರೆ.
ಮಳೆಗಾಲ ಬರುವುದಕ್ಕೆ ಮೊದಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಇಲಾಖೆಯ ಬೇಜವ್ದಾರಿಯಿಂದ ರಾತ್ರಿ ಎಲ್ಲಾ ವಿದ್ಯುತ್ ಇಲ್ಲದೆ ಕಳೆಯುವಂತ್ತಾಗಿದೆ. ಬಿಲ್ಲ್ ಪಡೆಯಲು ಇಲಾಖೆಗೆ ಇರುವ ಕಾಳಜಿ ಗ್ರಾಹಕರಿಗೆ ಸೇವೆ ನೀಡುವಲ್ಲಿ ಇಲ್ಲವಾಗಿದೆ, ಸೇವೆಗಾಗಿ ಮೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಪೋನ್ ಸ್ವಿಚ್ ಆಫ್, ಪಡುಬಿದ್ರಿ ಶಾಖಾಧಿಕಾರಿಗೆ ಮಾಡಿದರೆ ಅಪರೂಪಕ್ಕೊಮ್ಮೆ ಕರೆ ಸ್ವೀಕರಿಸಿ ಹಾರಿಕೆಯ ಉತ್ತರ ನೀಡಿ ಪೋನ್ ಕಟ್ಟ್, ಈ ಹಿಂದೆ ಸೇವೆಯಲ್ಲಿದ್ದು ಬೇರೆಡೆಗೆ ವರ್ಗಾವಣೆಗೊಂಡ ಅಧಿಕಾರಿಯ ಉತ್ತಮ ಸೇವೆಯನ್ನು ನಾವು ಇದೀಗ ಸ್ಮರಿಸುವಂತ್ತಾಗಿದೆ. ವಿದ್ಯುತ್ ಏರಿಳಿತದಿದ್ದಾಗಿ ಮನೆಗಳ ವಿದ್ಯುತ್ ಉಪಕರಣಗಳು ನಾಶವಾಗುತ್ತಿದ್ದು, ಈ ನಷ್ಟಗಳಿಗೆ ಯಾರು ಹೊಣೆ ಎಂಬುದಾಗಿ ಪ್ರಶ್ನಿಸಿದ್ದಾರೆ. ತಕ್ಷಣ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಮುಂದೆ ನಡೆಯುವ ಯಾವುದೇ ಸಮಸ್ಯೆಗೆ ಮೆಸ್ಕಾಂ ಇಲಾಖೆ ಹೊಣೆಯಾಗ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.
