ಸುರತ್ಕಲ್ ಬೃಹತ್ ಮಾರುಕಟ್ಟೆ ಕಾಮಗಾರಿ ಪುನರಾರಂಭ – ಡಾ. ಭರತ್ ಶೆಟ್ಟಿ
ಸುರತ್ಕಲ್: ಸುರತ್ಕಲ್ ನಗರದಲ್ಲಿ ಬಹುಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಕೊರೋನಾ ಬಳಿಕ ಮಾರುಕಟ್ಟೆಯಲ್ಲಿ ಸರಕುದರ ಏರಿಕೆ ಹಾಗೂ ಜಿಎಸ್‌ಟಿಯನ್ಬು ಟೆಂಡರ್ ನಲ್ಲಿ ತೋರಿಸದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಕಂಡಿದ್ದು ಸತತ ಪ್ರಯತ್ನದ ಬಳಿಕ
ಇದೀಗ 64 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ.
ಕಳೆದ ಬಾರಿ ಅಂದಾಜು 16 ಕೋಟಿಯ ಕಾಮಗಾರಿ ನಡೆದಿತ್ತು. ಬಳಿಕ ಗುತ್ತಿಗೆದಾರರು ಎಸ್ ಆರ್ ದರ ಹಾಗೂ ಜಿ ಎಸ್ ಟಿ ಯನ್ನು ಟೆಂಡರ್ ನಲ್ಲಿ ತೋರಿಸದ ಕಾರಣ ಭಾರಿ ನಷ್ಟವಾಗುತ್ತದೆ ಎಂದು ಕಾಮಗಾರಿ ನಡೆಸಲು ಹಿಂದೆ ಸರಿದಿದ್ದರು.
ಇದೀಗ ತಾನು ಸತತವಾಗಿ ಈ ಹಿಂದಿನ ಬಿಜೆಪಿ ಸರಕಾರವಿದ್ದಾಗ ಹಣಕಾಸು ಇಲಾಖೆ , ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದ ಮೇರೆಗೆ ಟೆಂಡರ್ ನಡೆಸುವ ಪ್ರಾಥಮಿಕ ಹೆಜ್ಜೆ ಇರಿಸಲಾಗಿತ್ತು.
ಬದಲಾದ ಸರಕಾರದಲ್ಲಿ ಈಗಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಲ್ಲಿ ಖುದ್ದಾಗಿ ಭೇಟಿ ನೀಡಿ ಮಾಡಿದ ಮನವಿಗೆ ಸ್ಪಂದಿಸಿದ್ದು,
ಆರ್ಥಿಕ ಇಲಾಖೆಯು ಕೂಡ ಅನುಮೋದನೆ ನೀಡಿದ್ದು ಟೆಂಡರ್ ನೀಡಲಾಗಿದೆ. ಸರಕಾರವು ವಿಳಂಬ ಮಾಡದೆ
ಗುತ್ತಿಗೆದಾರರಿಗೆ ಅನುಮತಿ ಪತ್ರ ನೀಡಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ಭರತ್ ಶೆಟ್ಟಿ ವೈ ಹೇಳಿದ್ದಾರೆ.