ಪ್ರದಾನಿ ಆಗಮನದ ಹಿನ್ನೆಲೆ ಕೂಳೂರು, ಚೌಕಿ ವ್ಯಾಪ್ತಿಯಲ್ಲಿ ತುರ್ತುಪರಿಸ್ಥಿತಿ ವಾತಾವರಣ ಸಿಪಿಐ(ಎಂ) ಖಂಡನೆ.

ಸೆ 2ರ ಮೋದಿ ಸಮಾವೇಶಕ್ಕಾಗಿ ಕೂಳೂರು ವ್ಯಾಪ್ತಿಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಎರಡು ದಿನದ ಬಂದ್ ಗೆ ಆಡಳಿತವೇ ಕರೆನೀಡಿದೆ. ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಗಣೇಶೋತ್ಸವದ ನೆಪದಲ್ಲಿ ರಜೆ ಸಾರಲಾಗಿದೆ.. ಮೊದಲೇ ಕೊರೋನಾ, ನೆರೆ, ಬೆಲೆಏರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕಾರ್ಯಕ್ರಮವು ಒಂದು ಪಕ್ಷದ ಕಾರ್ಯಕರ್ತರ ರಾಜಕೀಯ ಸಮಾವೇಶ. ಸರಕಾರಿ ಕಾರ್ಯಕ್ರಮ ಅಲ್ಲ. ಭದ್ರತೆಯ ಆತಂಕ ಇದ್ದಲ್ಲಿ ಊರನ್ನೂ, ರಾಷ್ಟ್ರೀಯ ಹೆದ್ದಾರಿಯನ್ನೂ ಬಂದ್ ಮಾಡಿ ಜನತೆಯ ಉಸಿರುಗಟ್ಟಿಸಿ ಸಮಾವೇಶ ನಡೆಸುವ ಅಗತ್ಯವೇನಿತ್ತು? ಕಳೆದ ಎಂಟುವರ್ಷದಿಂದ ಕೂಳೂರು ಹೆದ್ದಾರಿಯ ಸರ್ವೀಸ್ ರಸ್ತೆ ಪಾಳು ಬಿದ್ದಿತ್ತು. ವಾಹನ ಸಂಚಾರರು ಪರದಾಡುವಾಗಲೂ ಇಣುಕಿ ನೋಡದ ಬಿಜೆಪಿ ಆಡಳಿತ ತರಾತುರಿಯಲ್ಲಿ ಮಳೆಯ ನಡುವೆಯೂ ಡಾಮಾರಿಕರಣ ನಡೆಸಿದೆ. ಚರಂಡಿಗಳನ್ನು ಮುಚ್ಚಿಹಾಕಲಾಗಿದೆ. ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಬಿಜೆಪಿ ತನ್ನ ಆಡಳಿತ ವೈಫಲ್ಯವನ್ನು ಸಂಪೂರ್ಣ ಮರೆಮಾಚುವ ತರಾತುರಿಯ ಕಾಮಗಾರಿ ನಡೆಸುತ್ತಿದೆ. ಪಕ್ಷದ ಕಾರ್ಯಕ್ರಮಕ್ಕೆ ಸರಕಾರದ ಖಜಾನೆ ಖಾಲಿ ಮಾಡಲಾಗಿದೆ. ಸಭೆಗೆ ಜನ ಸೇರಲು ಆಡಳಿತ ಯಂತ್ರದ ದುರುಪಯೋಗ ಮಾಡಲಾಗುತ್ತಿರುವ ಪ್ರಕ್ರಿಯೆಗಳನ್ನು ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ ಖಂಡಿಸಿದ್ದಾರೆ.

Related Posts

Leave a Reply

Your email address will not be published.