ದ್ವಿತೀಯ ಪಿಯುಸಿ ಪ್ರಥಮ ರ್‍ಯಾಂಕ್ ಪಡೆದ ಅನನ್ಯಳಿಗೆ ರೂ.3 ಲಕ್ಷ ನಗದು ಪುರಸ್ಕಾರ
ಮೂಡುಬಿದಿರೆ: ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿನಿ ಅನನ್ಯಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದರು. ಅನನ್ಯಳಿಗೆ ರೂ.3 ಲಕ್ಷ ನಗದು ಪುರಸ್ಕಾರವನ್ನು ಘೋಷಿಸಿದ ಅವರು, ಆಕೆ ಮುಂದಿನ ಸಿಎಸ್ ವ್ಯಾಸಂಗಕ್ಕೆ ಉಚಿತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.