ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ವೃದ್ಧಿಗೆ ಶಿಬಿರ ಸಹಕಾರಿ- ಸುಬ್ರಮಣ್ಯ ರಾವ್

ಸಂಸ್ಕೃತಿ, ಸಂಸ್ಕಾರ ಜೀವನ ವಿಧಾನಗಳ ಬಗ್ಗೆ ಕೇವಲ ಭಾಷಣ, ಬೋಧನೆಯ ಬದಲಾಗಿ ಪ್ರಾಯೋಗಿಕವಾಗಿ ಮಕ್ಕಳಿಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಹಾಗೂ ಇಂತಹ ಶಿಬಿರಗಳು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತೋಕೂರಿನ ವೇದ ವಿದ್ವಾಂಸರಾದ ವೇ.ಮೂ.ಟಿ.ಸುಬ್ರಹ್ಮಣ್ಯ ರಾವ್ ಅವರು ಪುನರೂರು ಪ್ರತಿಷ್ಠಾನ (ರಿ.) ಇದರ ಆಶಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಬಾಲ ವಿಕಾಸ ಶಿಬಿರ-20223ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದ ಖ್ಯಾತ ಯೋಗ ಗುರುಗಳಾದ ಜಯ ಮುದ್ದು ಶೆಟ್ಟಿ, ಶ್ಲೋಕ ಕಂಠಪಾಠ ಮಾಡಿಸಿದ ವಿಜಯ ಕಾಲೇಜಿನ ಉಪನ್ಯಾಸಕರಾದ ಜಿತೇಂದ್ರ ವಿ.ರಾವ್ ಹೆಜಮಾಡಿ,ಅಭಿನಯ ತರಬೇತಿಯನ್ನು ನೀಡಿದ ರಂಗನಟ ಹಾಗೂ ನಿರ್ದೇಶಕರಾದ ತಾರನಾಥ ಊರ್ವ ,ಆವೆ ಮಣ್ಣಿನ ಕಲಾಕೃತಿ ರಚನೆ ಮತ್ತು ಕರಕುಶಲ ತರಬೇತಿಯನ್ನು ನೀಡಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಿ ಫಲಿಮಾರು, ಭಜನೆ ತರಬೇತಿಯನ್ನು ನೀಡಿದ ಗಾಯಕರಾದ ಸುರೇಶ್ ಆಚಾರ್ಯ ಹಳೆಯಂಗಡಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಶಿಬಿರದಲ್ಲಿ ಪಾಲ್ಗೊಂಡ 92 ಶಿಬಿರಾರ್ಥಿಗಳಿಗೆ ನೆನಪಿನಕಾಣಿಕೆ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು

ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮುಕ್ತೇಸರಾದ ಪಟೇಲ್ ವಾಸುದೇವ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಉದ್ಯಮಿಗಳಾದ ಮನೋಜ್ ಕುಮಾರ್ ಶಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮೂಲ್ಕಿಯ ಬಂಟರ ಸಂಘ (ರಿ) ಇದರ ಅಧ್ಯಕರಾದ ಪುರುಷೋತ್ತಮ ಶೆಟ್ಟಿ ,ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘ (ರಿ)ಇದರ ಅಧ್ಯಕ್ಷರಾದ ಎಂ.ಪ್ರಕಾಶ್ ಸುವರ್ಣ ಹಾಗೂ ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷರಾದ ಶೋಭಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುನರೂರು ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು,ಜನ ವಿಕಾಸ ಸಮಿತಿ ಮೂಲ್ಕಿಯ ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ವಂದಿಸಿದರು,ಹಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.